ಹಿಂದುಗಳಿಗೆ ಅತ್ಯಂತ ಪವಿತ್ರ ಎನಿಸಿದ ವಟ ಸಾವಿತ್ರಿ ವ್ರತ ಇಂದು ನಡೆಯಲಿದೆ.

ವಟ ಸಾವಿತ್ರಿ ವ್ರತದ ದಿನದಂದು ಮಹಿಳೆಯರು ಸೂರ್ಯೋದಯಕ್ಕೆ ಮುಂಚಿತವಾಗಿ ಏಳಬೇಕು.
– ಸ್ನಾನದ ನಂತರ, ಮಹಿಳೆಯರು ಹೊಸ ಬಟ್ಟೆ, ಬಳೆಗಳನ್ನು ಧರಿಸಿ, ಹಣೆಗೆ ಸಿಂಧೂರವನ್ನಿಟ್ಟುಕೊಳ್ಳಬೇಕು.
– ನಂತರ ಆಲದ ಮರದ ಬೇರಿಗೆ ನೀರನ್ನು ಅರ್ಪಿಸಿ. ಬೆಲ್ಲ, ಬೇಳೆ, ಹಣ್ಣುಗಳು, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.

– ಮಹಿಳೆಯರು ಈ ದಿನ ತಮಗೆ ಹತ್ತಿರದಲ್ಲಿರುವ ಆಲದ ಮರದ ಬಳಿ ಹೋಗಿ ಹಳದಿ ಅಥವಾ ಕೆಂಪು ಬಣ್ಣದ ದಾರವನ್ನು ಆಲದ ಮರಕ್ಕೆ ಸುತ್ತಿ ಪ್ರದಕ್ಷಿಣೆಯನ್ನು ಹಾಕಬೇಕು.
– ಆಲದ ಮರಕ್ಕೆ ಪರಿಕ್ರಮ ಮಾಡುವಾಗ ಗಂಡನ ಅದೃಷ್ಟ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಬೇಕು.
– ವಟ ಸಾವಿತ್ರಿ ವ್ರತದ ದಿನದಂದು ಮಹಿಳೆಯರು ಮನೆಯ ಹಿರಿಯರಿಂದ ಮತ್ತು ವಿವಾಹಿತ ಮಹಿಳೆಯರಿಂದ ಆಶೀರ್ವಾದ ಪಡೆಯಬೇಕು.
– ವಟ ಸಾವಿತ್ರಿ ವ್ರತದಂದು ದಾನ ಮಾಡುವುದೂ ಬಹಳ ಫಲಕಾರಿ. ಈ ದಿನದಂದು ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ, ಆಹಾರ ಮತ್ತು ಬಟ್ಟೆಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು.

ಕೆಂಪು ಕಲವಾ ಅಥವಾ ಮೌಲಿ ಅಥವಾ ಸೂತ್ರ
– ಬಿದಿರಿನ ಬೀಸಣಿಕೆ
– ಆಲದ ಮರದ ಎಲೆಗಳು
– ಪೂಜೆಯಲ್ಲಿ ಇಡಲು ಕೆಂಪು ಬಟ್ಟೆ, ಕುಂಕುಮ ಅಥವಾ ಕೆಂಪು ಬಣ್ಣ
– ಧೂಪ, ದೀಪ ಮತ್ತು ಹೂವುಗಳು
– ಹಣ್ಣು
– ನೀರು ತುಂಬಿದ ಕಲಶ
– ಸುಮಂಗಲಿಯರು ಬಳಸುವ ವಸ್ತುಗಳು
– ಚನ್ನಾ
– ಕಡಲೆಕಾಯಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ವಟ ಸಾವಿತ್ರಿ ವ್ರತದ ಮಹತ್ವವು ಕರ್ವಾ ಚೌತ್‌ನಂತೆಯೇ ಇರುತ್ತದೆ. ಈ ದಿನ, ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರವನ್ನು ವಟ ವೃಕ್ಷ ಎಂದು ಕರೆಯಲಾಗುವುದರಿಂದ ಈ ವ್ರತಕ್ಕೆ ವಟ ಸಾವಿತ್ರಿ ವ್ರತವೆಂದು ಕರೆಯಲಾಗುತ್ತದೆ. ಈ ದಿನ ನಿರ್ದಿಷ್ಟ ಆಚರಣೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಿ ಆಲದ ಮರವನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಮೃದ್ಧಿ, ಅಖಂಡ ಸಂತೋಷ ಸಿಗುತ್ತದೆ ಹಾಗೂ ಎಲ್ಲಾ ರೀತಿಯ ನೋವು ಮತ್ತು ದುಃಖಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.

ವಟ ಸಾವಿತ್ರಿ ವ್ರತ ಕಥೆ:​
ಸಾವಿತ್ರಿ ಮತ್ತು ಸತ್ಯವಾನನು ಒಬ್ಬರನ್ನೊಬ್ಬರು ಅಪಾರ ಪ್ರೀತಿಸುತ್ತಿದ್ದರು. ಸಾವಿತ್ರಿ ಚಿಕ್ಕವಳಿದ್ದಾಗಲೇ ಅವಳ ತಂದೆ ಆಕೆಗೆ ವಿವಾಹವನ್ನು ಮಾಡಲು ವರನನ್ನು ಹುಡುಕುತ್ತಾನೆ. ಆ ಸಂದರ್ಭದಲ್ಲಿ ಸಾವಿತ್ರಿಯು ಸತ್ಯವಾನ್‌ನ್ನೇ ವರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಗ ನಾರದ ಮಹರ್ಷಿಗಳು ಈತನನ್ನು ಮದುವೆಯಾದರೆ ಕೇವಲ 12 ವರ್ಷಗಳ ನಂತರ ಈತ ಮರಣ ಹೊಂದುತ್ತಾನೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಸತ್ಯವಾನ್‌ ತನ್ನ ಮಗಳಿಗೆ ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ಆದರೆ ಸಾವಿತ್ರಿ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನ್‌ ನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸಿದಳು.

ನಾರದರಿಂದ ಸತ್ಯವಾನ್‌ ನ ಸಾವಿನ ವಿಷಯ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬರುತ್ತಾಳೆ. ತನ್ನ ಪತಿ ಸತ್ಯವಾನ್‌ ನ್ನು ಯಮರಾಜ ಕರೆದುಕೊಂಡು ಹೋಗಲು ಬಂದಾಗಲೇ ಸಾವಿತ್ರಿ ಕೂಡ ಯಮನನ್ನು ಹಿಂಬಾಲಿಸಿಕೊಂಡೇ ಹೋಗಿದ್ದಳು. ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ಆಕೆಯಲ್ಲಿ ನಿನಗೆ ಯಾವ ವರಬೇಕು ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿಯು ಮೊದಲು ತನ್ನ ಅತ್ತೆಗೆ ಕಣ್ಣುಗಳನ್ನು ಕರುಣಿಸು ತದನಂತರ ತನ್ನ ಗಂಡನಿಗೆ ದೀರ್ಘಾಯುಷ್ಯವನ್ನು ನೀಡೆಂದು ಕೇಳಿಕೊಳ್ಳುತ್ತಾಳೆ.

ಸಾವಿತ್ರಿ ತನ್ನ ಜಾಣ್ಮೆಯಿಂದ ಯಮನಲ್ಲಿ ಕೇಳಿದ ವರವನ್ನು ಯಮನು ಕರುಣಿಸಲೇ ಬೇಕಾಗಿತ್ತು. ಹಾಗಾಗಿ ಸಾವಿತ್ರಿಯ ವರದ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಯಮರಾಜನು ಸಾವಿತ್ರಿಯ ಪತಿ ಸತ್ಯವಾನ್‌ನ ಜೀವವನ್ನು ಕಡಲೆಕಾಳಿನ ರೂಪದಲ್ಲಿ ಪುನಃ ಆಕೆಗೆ ನೀಡುತ್ತಾನೆ. ಆದ್ದರಿಂದ ವಟ ಸಾವಿತ್ರಿ ಪೂಜೆಯನ್ನು ಮಾಡುವಾಗ ನೆನೆಸಿದ ಕಡಲೆಕಾಳನ್ನು ಅರ್ಪಿಸಲಾಗುತ್ತದೆ. ಮತ್ತು ಈ ವ್ರತವನ್ನು ಆಚರಿಸುವುದರಿಂದ ಪತಿಯು ದೀರ್ಘಾಯುಷ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.