ಬೆಳ್ವೆ : ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಸಮೀಪದ ಗುಮ್ಮೋಲ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಗೋಳಿಯಂಗಡಿ ಜ್ಯುವೆಲ್ಲರ್ಸ್ ವೊಂದರ ಮಾಲಕ ಶ್ರೀಧರ ಆಚಾರ್ಯ ಅವರ ಪುತ್ರ 13 ವರ್ಷದ ಶ್ರೀಶ (8ನೇ ತರಗತಿ) ಹಾಗೂ ಗುಮ್ಮೋಲ ಎಂಬಲ್ಲಿನ ರಾಮ ನಾಯ್ಕ ಅವರ ಪುತ್ರ 19 ವರ್ಷದ ಜಯಂತ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಶ್ರೀಶ ಹೆಬ್ರಿಯ ಎಸ್‌ಆರ್‌ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ. ಒಟ್ಟು ನಾಲ್ಕು ಮಂದಿ ಬಾಲಕರು ರಜೆಯ ಹಿನ್ನೆಲೆಯಲ್ಲಿ ಮನೆ ಸಮೀಪದ ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಹಾಗೂ ಜಯಂತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ವಿವರ : ಬೆಳ್ವೆ ಗ್ರಾಮದ
ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ
ನಡೆದಿದೆ.
ಗುಮ್ಮೋಲ ಹರ್ಗಗುಂಡಿ ರಾಮ ನಾಯ್ಕ, ಕಾವೇರಿ ಬಾಯಿ ಪುತ್ರ ಜಯಂತ್ ನಾಯ್ಕ 19 ವರ್ಷ ಹಾಗೂ ಗೋಳಿಯಂಗಡಿ ಶ್ರೀದುರ್ಗಾ ಜುವೆಲರ್ಸ್ ಮಾಲಕ
ಶ್ರೀಧರ ಆಚಾರ್ಯ ಬೆಳ್ವೆ ಮತ್ತು ಶ್ರೀಮತಿ
ಆಚಾರ್ಯ ಪುತ್ರ ಶ್ರೀಶ ಆಚಾರ್ಯ 14 ವರ್ಷ ಇವರಿಬ್ಬರು ಸ್ನೇಹಿತರಾಗಿದ್ದು ಭಾನುವಾರ ಮಧ್ಯಾಹ್ನ
ಸುಮಾರು 1 ಗಂಟೆ ಸಮಯಕ್ಕೆ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ
ಸ್ನಾನಕ್ಕೆ ತೆರಳಿದಾಗ ಶ್ರೀಶ ಆಚಾರ್ಯ ಕಲ್ಲಿನ ಮೇಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮುಳುಗುವುದನ್ನು
ಗಮನಿಸಿ ಜಯಂತ್ ನಾಯ್ಕ ಆತನನ್ನು ರಕ್ಷಿಸಲು ಹೋಗುತ್ತಾನೆ. ನೀರಿನಿಂದ ಮೇಲೆ ಬರಲು ಆಗದೇ
ಇಬ್ಬರು ನೀರಿನಲ್ಲಿ ಮುಳುಗಿ
ಸಾವನ್ನಪ್ಪಿರುತ್ತಾರೆ.ಹೊಳೆಯ ದಡದಲ್ಲಿದ್ದ ಇಬ್ಬರು ಬಾಲಕರು ಸ್ಥಳದಿಂದ ಓಡಿ ಹೋಗಿ ಸಮೀಪದ ಮನೆಯವರಿಗೆ ನಡೆದ ಘಟನೆಯನ್ನು
ತಿಳಿಸಿರುತ್ತಾರೆ. ಸ್ಥಳೀಯರು ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿರುತ್ತಾರೆ. ನಾಗರಾಜ ನಾಯ್ಕ ಅಲ್ಬಾಡಿ
ಹಾಗೂ ಚೋಣ ನೀರಿಗಿಳಿದು ನೀರಿನಲ್ಲಿ ಮುಳುಗಿದ ಇಬ್ಬರು ಬಾಲಕರನ್ನು ಮೇಲಕ್ಕೆ ಎತ್ತಿ ತಂದು ರಕ್ಷಿಸಲು
ಪ್ರಯತ್ನಿಸಿದರೂ ಅಷ್ಟರಲ್ಲಿಯೇ ಇಬ್ಬರು
ಸಾವನ್ನಪ್ಪಿರುತ್ತಾರೆ.
ಜಯಂತ್ ನಾಯ್ಕ ಗುಮ್ಮೋಲ ಯಕ್ಷಗಾನ
ಕಲಾವಿದರಾಗಿದ್ದು ಈ ವರ್ಷ ಯಕ್ಷಗಾನ ಮೇಳಕ್ಕೆ ಹೋಗದೇ ಊರಿನಲ್ಲಿ ಕೆಲಸ ಮಾಡಿಕೊಂಡಿದ್ದರು.ಶ್ರೀಶ
ಆಚಾರ್ಯ ಬೆಳ್ವೆ ಈತ ಹೆಬ್ರಿ (ಎಸ್‌ಆರ್‌ಎಸ್) ಖಾಸಗಿ ಶಿಕ್ಷಣ
ಸಂಸ್ಥೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸರಳ ಸ್ವಭಾವದ ಈತ ಪರಿಸರದ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಇವರಿಬ್ಬರು ಸ್ಥಳೀಯ ಭಜನಾ ತಂಡದಲ್ಲಿ
ಸ್ನೇಹಿತರಾಗಿದ್ದರು.ಮೃತ ಜಯಂತ್ ನಾಯ್ಕ ಇವರಿಗೆ ತಂದೆ,ತಾಯಿ,ತಂಗಿ ಇದ್ದಾರೆ. ಮೃತ ಶ್ರೀಶ ಆಚಾರ್ಯ
ಇವರಿಗೆ ತಂದೆ, ತಾಯಿ ಅಕ್ಕ ಇದ್ದಾರೆ.ಘಟನಾ ಸ್ಥಳಕ್ಕೆ
ನೂರಾರು ಮಂದಿ ಆಗಮಿಸಿ ಶೋಕ ವ್ಯಕ್ತಪಡಿದರು. ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್,ಎಸ್‌ಐ ಶಂಭುಲಿಂಗಯ್ಯ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಮಹಜರು
ನಡೆಸಿದರು.ಬೆಳ್ವೆ ಪ್ರಾಥಮಿಕ ಆರೋಗ್ಯ
ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ
ವಾರಸುದಾರರಿಗೆ ಶವವನ್ನು ನೀಡಿದ್ದಾರೆ.
ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ,ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ನೂರಾರೂ
ಮಂದಿ ಸ್ಥಳಕ್ಕೆ ಆಗಮಿಸಿದ್ದರು.