ಅಥಣಿ-

ಸಾಹಿತ್ಯ ಕ್ಷೇತ್ರದಲ್ಲಿ 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಶಿರಹಟ್ಟಿ ಗ್ರಾಮದ ಬಾಳಸಾಹೇಬ ಲೋಕಾಪುರ ಅವರಿಗೆ ಇಂದು ಅಥಣಿಯ ನ್ಯಾಯವಾದಿ ಕೆ ಎ ವನಜೋಳ ಅವರ ಕಚೇರಿಯಲ್ಲಿ ಕೆ ಎಲ್ ಕುಂದರಿಗೆ ವಕೀಲರ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಆ ಸಂದರ್ಭದಲ್ಲಿ ಡಿ ಬಿ ಟಕ್ಕಣ್ಣವರ ವಕೀಲರು ವಿದ್ಯಾಧರ ಡುಮ್ಮನವರ, ಪದ್ಮಶ್ರೀ ಕರವ, ಯು ಎಸ್ ತೇರದಾಳ, ಜಯಪಾಲ ಹಳಿಂಗಳಿ ಮತ್ತು ವಿನೋದ ನರೋಟೆ ವಕೀಲರು ಉಪಸ್ಥಿತರಿದ್ದರು, ಪ್ರಶಸ್ತಿ ಪುರಸ್ಕೃತರಾದ ಲೋಕಾಪುರವರು ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ನನಗೆ ಮತ್ತಷ್ಟು ವಿನಯವನ್ನು ಹೆಚ್ಚಿಸಿದೆ ಎಂದರು.