ರಾಮನಗರ : ಪ್ರಖರ ಬಿಸಿಲಿನ ಆರ್ಭಟ ತಾಳಲಾರದೆ ಎರಡು ಕಾಡಾನೆ ಮೃತಪಟ್ಟಿವೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಗರಳಾಪುರ ಗ್ರಾಮದ ಬಳಿ ಆನೆಯ ಮೃತದೇಹ ಪತ್ತೆಯಾಗಿದೆ.

ಯಳವನಾಥ ಗ್ರಾಮದಲ್ಲೂ 34 ವರ್ಷದ ಮತ್ತೊಂದು ಆನೆಯ ಮೃತ ದೇಹ ಪತ್ತೆಯಾಗಿದೆ. ಇವುಗಳ ಸಾವಿಗೆ ನೀರು ಮತ್ತು ಆಹಾರದ ಸಮಸ್ಯೆ ಕಾರಣ ಎನ್ನಲಾಗಿದೆ. ಮೂರು ದಿನಗಳ ಹಿಂದೆ 14 ವರ್ಷದ ಗಂಡಾನೆ ಬಿಸಿಲ ಬೇಗೆಯಿಂದ ನಿತ್ರಾಣಗೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯನ್ನು ಉಪಚರಿಸಿ ಅರಣ್ಯಕ್ಕೆ ಬಿಟ್ಟಿದ್ದರು. ಈಗ ಅದೇ ಆನೆ ಮೃತಪಟ್ಟಿದೆ.

ಕನಕಪುರ ತಾಲೂಕಿನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಸೇರಿದ ಸ್ಥಳದಲ್ಲಿ ಸಾವಿಗೀಡಾಗಿದ್ದು ಬಿಸಿಲಿನ ತಾಪಮಾನ ಹೆಚ್ಚಾಗಿರುವುದೇ ಆನೆಗಳ ಸಾವಿಗೆ ಕಾರಣ ಎನ್ನಲಾಗಿದೆ.