ಗೋಕಾಕ :
ಗೋಕಾಕ ತಾಲೂಕಿನ ಲೋಳಸೂರ ಸಮೀಪ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಲೋಳಸೂರ ಬ್ರಿಡ್ಜ್ ಹಾಗೂ ನಾಕಾ ನಂ.1ರ ನಡುವೆ ಈ ಅಪಘಾತ ನಡೆದಿದೆ.

ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ.

ಟ್ರ್ಯಾಕ್ಟರ್ ಪಲ್ಟಿಯಾಗಿದ ಹಿನ್ನೆಲೆಯಲ್ಲಿ ಎರಡು ಬೈಕ್ ಸವಾರರು ಟ್ರ್ಯಾಕ್ಟರ್ ಕೆಳಗಡೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೈಕ್ ಸವಾರರು ಗೋಕಾಕದತ್ತ ತೆರಳುತ್ತಿದ್ದರೆಂದು ಹಾಗೂ ಕಬ್ಬು ತುಂಬಿದ ಟ್ರ್ಯಾಕ್ಟರ್ ಗೋಕಾಕದಿಂದ ಲೋಳಸೂರದತ್ತ ಹೋಗುತ್ತಿತ್ತು ಎಂದು ಮಾಹಿತಿ ದೊರೆತಿದೆ.

ಒಂದು ಬೈಕ್’ನ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಇನ್ನೋರ್ವ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತರಾಗಿದ್ದಾರೆಂದು ಹೇಳಲಾಗುತ್ತಿದೆ. ಸರಿಯಾದ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಒಂದು ಬೈಕ್ ಸವಾರರು ಶಿವಾಪುರ (ಮೂಡಲಗಿ ತಾಲೂಕು) ಗ್ರಾಮದಿಂದ ಆಗಮಿಸುತ್ತಿದ್ದರು. ಮತ್ತೋರ್ವ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದವರೆಂದು ಹೇಳಲಾಗುತ್ತಿದೆ.

ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.