ಬೆಳಗಾವಿ:
ಖಾನಾಪುರ ತಾಲೂಕಿನ ಗರ್ಲಗುಂಜಿ ರಸ್ತೆಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೇಕವಾಡ ಗ್ರಾಮದ ರಾಮಲಿಂಗ ಮುತಗೇಕರ /ಅಪ್ಪಿ(20) ಮತ್ತು ಹನುಮಂತ ಮಹಾಬಲೇಶ್ವರ ಪಾಟೀಲ (19) ಮೃತರು. ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಪಡೆಯಲು ಇವರು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಸಣ್ಣ ಹೊಸೂರ ಬಳಿ ವಾಹನ ಡಿಕ್ಕಿಯಾಗಿದೆ.

ಸ್ಥಳಕ್ಕೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹಾಗೂ ಖಾನಾಪುರ ಪೊಲೀಸರು ಭೇಟಿ ನೀಡಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.28ರಂದು ಬೇಕವಾಡ ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರೆ ನಡೆಯಲಿರುವುದರಿಂದ ಇಡೀ ಗ್ರಾಮ ಜಾತ್ರೆಗೆ ಸಿದ್ಧತೆ ನಡೆಸಿದ್ದು, ಈ ಭೀಕರ ಅವಘಡ ಸಂಭವಿಸಿದಾಗ ಇಡೀ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.