ಬೆಳಗಾವಿ:
ದೇವಗಿರಿ ಹಾಗೂ ಬಂಬರಗಾ ಗ್ರಾಮಗಳ ಮಧ್ಯೆ ಇರುವ ಸರ್ಕಲ್ ನಲ್ಲಿ ಟಿಪ್ಪರ್- ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ವರ್ಷದ ಬಾಲಕಿ, 26 ವರ್ಷದ ಯುವಕ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.
ರಾತ್ರಿ 10: 30 ಗಂಟೆ ಸುಮಾರಿಗೆ ಕಂಗ್ರಾಳಿ ಕೆ.ಎಚ್. ಗ್ರಾಮದ ಕಡೆಯಿಂದ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಸ್ವಗ್ರಾಮ ಬಂಬರಗಾ ಗ್ರಾಮಕ್ಕೆ ಹೋಗತ್ತಿದ್ದ ಸಮಯದಲ್ಲಿ ಕೇದನೂರ ಗ್ರಾಮದ ಕಡೆಯಿಂದ ಭೂತರಾಮನಹಟ್ಟಿ ಗ್ರಾಮದ ಕಡೆಗೆ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಸಮಯದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಡಿಸೇಲ್ ಟ್ಯಾಂಕ್ ಒಡೆದು ಕಾರು ಹಾಗೂ ಟಿಪ್ಪರ್ ಬೆಂಕಿಗಾಹುತಿಯಾಗಿವೆ. ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬಂಬರಗಾ ಗ್ರಾಮದ 26 ವರ್ಷದ ಮೋಹನ ಮಾರುತಿ ಬೆಳಗಾಂವಕರ ಹಾಗೂ ಮಚ್ಛೆ ಗ್ರಾಮದ 11 ವರ್ಷದ ಸಮೀಕ್ಷಾ ಸಾಗರ ಡೋಳೇಕರ ಕಾರಿನಲೇ ಮೃತಪಟ್ಟಿದ್ದಾರೆ.

 

ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ಮಹೇಶ ಬೆಳಗಾಂವಕರ ಹಾಗೂ ಸ್ನೇಹಾ ಬೆಳಗುಂದಕರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.