ಬೀದರ : ಬೀದರ ತಾಲೂಕು ಹಾಗೂ ಔರಾದ್‌ ತಾಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಮಳೆಯಾಗಿದೆ.

ಬೀದರ್‌ ತಾಲೂಕಿನ ಬರೂರ ಗ್ರಾಮದ ಜಮೀನಿನಲ್ಲಿ ಮಧ್ಯಾಹ್ನ ಪುಷ್ಪಲತಾ ರವೀಂದ್ರ ರೆಡ್ಡಿ (50) ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಔರಾದ್‌ ತಾಲ್ಲೂಕಿನ ಚಿಕ್ಲಿ (ಜೆ) ತಾಂಡಾ ನಿವಾಸಿ ಭೀಮಲಾ (70) ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.