Join The Telegram | Join The WhatsApp |
ಬೆಳಗಾವಿ :
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲೂ ಆಗಿ 2022-23 ನೇ ಶೈಕ್ಷಣಿಕ ವರ್ಷಕ್ಕೆ ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ಸಮೀಕ್ಷಾ ಎ. ಚವಾಣ್ ಮತ್ತು ಕೋಮಲ್ ಲಾಟ್ಕರ್ ಆಯ್ಕೆಯಾಗಿದ್ದಾರೆ.
ಸಮೀಕ್ಷಾ ಎ. ಚವ್ಹಾಣ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಹಾಗೂ ಕೋಮಲ್ ಲಾಟ್ಕರ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಜಿಮಖಾನಾ ಒಕ್ಕೂಟದ ಸಮನ್ವಯಕಾರ ಡಾ.ಪ್ರಸನ್ನಕುಮಾರ, ಜಿಮಖಾನಾ ಒಕ್ಕೂಟದ ಸಹಾಯಕ ದೈಹಿಕ ನಿರ್ದೇಶಕ ಅಮಿತ್ ಜಾಧವ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Join The Telegram | Join The WhatsApp |