ಬೆನೋನಿ :

ಅಂಡರ್ 19 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ.

ಈ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. 245 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ, 48.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಆರಂಭಿಕ ಆಘಾತ ಎದುರಿಸಿದ್ದ ಭಾರತಕ್ಕೆ ಸಚಿನ್‌ ದಾಸ್‌ (96), ಉದಯ್ (81) ಆಸರೆಯಾಗುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹರಿಣಗಳ ಪರ ಟ್ರಿಸ್ಟಾನ್‌ 3, ಕೈನಾ ಮಫಕಾ 3 ವಿಕೆಟ್ ಪಡೆದರು.

 

ಮೊದಲು ಬ್ಯಾಟಿಂಗ್ ನಡೆಸಿದ ಅತಿಥೇಯ ದಕ್ಷಿಣ ಆಫ್ರಿಕಾ, ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಆರಂಭಿಕ ಬ್ಯಾಟರ್ ಲುವಾನ್ ಡ್ರೆ ಪ್ರಿಟೋರಿಯಸ್ (76) ಹಾಗೂ ರಿಚರ್ಡ್ ಸೆಲೆಸ್ವಾನ್ (64) ಆಕರ್ಷಕ ಅರ್ಧಶತಕ ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಒಲಿವರ್ ವೈಟ್‌ಹೆಡ್ (22), ನಾಯಕ ಜುವಾನ್ ಜೇಮ್ಸ್ (24) ಹಾಗೂ ಟ್ರಿಸ್ಟನ್ ಲಿಸ್ (23*) ಉಪಯುಕ್ತ ಕಾಣಿಕೆ ನೀಡಿದರು.

ಭಾರತದ ಪರ ರಾಜ್ ಲಿಂಬಾನಿ ಮೂರು, ಮುಶೀರ್ ಖಾನ್ ಎರಡು ಮತ್ತು ಸೌಮಿ ಪಾಂಡೆ ಹಾಗೂ ನಮನ್ ತಿವಾರಿ ತಲಾ ಒಂದು ವಿಕೆಟ್ ಗಳಿಸಿದರು.

ಸತತ 5ನೇ ಸಲ ಫೈನಲ್‌ಗೆ ಲಗ್ಗೆ

ಐದು ಬಾರಿಯ ಚಾಂಪಿಯನ್ ಭಾರತ ಆರನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣು ನೆಟ್ಟಿದೆ. ಅಲ್ಲದೆ ಸತತ ಐದನೇ ಸಲ ಸೇರಿದಂತೆ ಒಟ್ಟಾರೆಯಾಗಿ ಒಂಬತ್ತನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್: 2000, 2008, 2012, 2018, 2022.

19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಎರಡು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಭಾರತ, ಸತತ ಐದನೇ ಸಲ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅತಿಥೇಯ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಬಳಿಕ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 11.2 ಓವರ್‌ಗಳಲ್ಲಿ ಕೇವಲ 32 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಐದನೇ ವಿಕೆಟ್‌ಗೆ 172 ರನ್‌ಗಳ ಜೊತೆಯಾಟ ಕಟ್ಟಿದ ನಾಯಕ ಉದಯ್ ಸಹಾರನ್ (81) ಹಾಗೂ ಸಚಿನ್ ಧಾಸ್ (96) ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಅಂತಿಮವಾಗಿ ಇನ್ನು ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ 48.5 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸಚಿನ್ ಧಾಸ್ 95 ಎಸೆತಗಳಲ್ಲಿ 96 (11 ಬೌಂಡರಿ, 1 ಸಿಕ್ಸರ್) ಮತ್ತು ನಾಯಕ ಸಹಾರನ್ 124 ಎಸೆತಗಳಲ್ಲಿ 81 ರನ್ ಗಳಿಸಿ (6 ಬೌಂಡರಿ) ತಂಡವನ್ನು ಗೆಲುವಿನ ದಡ ಸೇರಿಸಿದರು.

ಆದರ್ಶ್ ಸಿಂಗ್ (0), ಅರ್ಷಿನ್ ಕುಲಕರ್ಣಿ (12), ಮುಶೀರ್ ಖಾನ್ (4), ಪ್ರಿಯಾಂಶು ಮೊಲಿಯಾ (5), ಎ.ಅವನಿಶ್ (0) ಹಾಗೂ ಮುರುಗನ್ ಅಭಿಷೇಕ್ (0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೊನೆಯ ಹಂತದಲ್ಲಿ ಸಿಕ್ಸರ್ ಗಳಿಸಿದ ರಾಜ್ ಲಿಂಬಾನಿ (13*) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

 

 

ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಪರಾಜಯ ಅನುಭವಿಸುವ ಮೂಲಕ ದಕ್ಷಿಣ ಆಫ್ರಿಕಾದ 19 ವರ್ಷದೊಳಗಿನವರ ತಂಡವು ಚೋಕರ್ಸ್‌ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಯುವ ತಂಡವು ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಭಾರತದ 19 ವರ್ಷದೊಳಗಿನವರ ತಂಡವು ಸತತ 5ನೇ ಬಾರಿಗೆ ಫೈನಲ್‌ ತಲುಪಿದಂತಾಗಿದೆ. ಅಷ್ಟೇ ಅಲ್ಲ, 9ನೇ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ.