ಗೋಕಾಕ : ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ ಸಣ್ಣಧರೆಪ್ಪ ಜಲ್ಲಿ, ತುಕ್ಕಾನಟ್ಟಿಯ ಸಿದ್ದಪ್ಪ ಶಿವಮೂರ್ತಿ ಹಮ್ಮನವರ, ಸುಭಾಸ ಗಿರೆಪ್ಪ ಢವಳೇಶ್ವರ, ವೈಯಕ್ತಿಕ ಸದಸ್ಯರ “ಬ” ವರ್ಗ ಸಾಮಾನ್ಯ ಕ್ಷೇತ್ರದಿಂದ ಕುಲಗೋಡದ ಅಶೋಕ ಮುದುಕಪ್ಪ ನಾಯಿಕ, ರಾಜಾಪೂರದ ವಿಠ್ಠಲ ಉದ್ದಪ್ಪ ಪಾಟೀಲ, ಮಹಿಳಾ ಕ್ಷೇತ್ರಗಳಿಂದ ಅರಭಾವಿಯ ಗಂಗವ್ವ ಸಾತಪ್ಪ ಜೈನ, ಅಕ್ಕತಂಗೇರಹಾಳದ ಲುಬನಾ ಗೌಸಮೋದ್ದೀನ ದೇಸಾಯಿ, ಹಿಂದುಳಿದ ಅ ಕ್ಷೇತ್ರದಿಂದ ಖಾನಟ್ಟಿಯ ವೆಂಕನಗೌಡ ಬಾಲಗೌಡ ಪಾಟೀಲ, ಬ ವರ್ಗ ಕ್ಷೇತ್ರದಿಂದ ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, ಬ ವರ್ಗ ಪ.ಜಾ.ಯಿಂದ ಮೂಡಲಗಿಯ
ಪ್ರಭಾಕರ ತಾ. ರತ್ನವ್ವ ಬಂಗೆನ್ನವರ ಮತ್ತು ಬ ವರ್ಗ ಪ.ಪಂ.ದಿಂದ ಗೋಕಾಕದ ಸುರೇಶ ಭೀಮಶಿ ಗುಡ್ಡಾಕಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅವರು ಪ್ರಕಟಿಸಿದರು.
ಮುಂದಿನ ಐದು ವರ್ಷ ಅವಧಿಗೆ ಇದೇ ದಿನಾಂಕ ೨೪ ರಂದು ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿತ್ತು.
ಎಲ್ಲ ಸ್ಥಾನಗಳಿಗೂ ತಲಾ ಒಬ್ಬೊಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಸಲಾಯಿತು ಎಂದು ಗೋಖಲೆ ತಿಳಿಸಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ,
ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ.
ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಪರವಾಗಿ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ ಮತ್ತು ನಿಂಗಪ್ಪ ಕುರಬೇಟ ಅವರು ಅಭಿನಂದನೆ ಸಲ್ಲಿಸಿದರು.