ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಬೆಳಿಗ್ಗೆ 11 ಗಂಟೆಗೆ ‘ಮೋದಿ 3.0’ ಸರ್ಕಾರದ ಮೊದಲ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ.
ಸತತ ಮೂರನೇ ಅವಧಿಯ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳು ಮತ್ತು ಇತರ ವಿಷಯಗಳ ಜೊತೆಗೆ ಭಾರತದಲ್ಲಿ ವ್ಯಾಪಾರ-ವ್ಯವಾಹರದಲ್ಲಿನ ಪ್ರಕ್ರಿಯೆಗಳನ್ನು ಇನ್ನಷ್ಟು ಸುಧಾರಿಸುವ ಬಗ್ಗೆ ಬಜೆಟ್ ಕೇಂದ್ರೀಕರಿಸುವ ಸಾಧ್ಯತೆಯಿದೆ.
ಜುಲೈ 23 ರಂದು ಬಜೆಟ್ ಮಂಡನೆಯೊಂದಿಗೆ, ನಿರ್ಮಲಾ ಸೀತಾರಾಮನ್ ಅವರು ಸತತ ಏಳು ಬಜೆಟ್‌ಗಳನ್ನು ಮಂಡಿಸಿದ ಮೊದಲ ಹಣಕಾಸು ಮಂತ್ರಿಯಾಗಲಿದ್ದಾರೆ. ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ಆರು ಬಜೆಟ್‌ಗಳನ್ನು ಮಂಡಿಸಿದ ದಾಖಲೆಯನ್ನು ಮುರಿಯಲಿದ್ದಾರೆ.
ಭಾರತದ ಇತಿಹಾಸದಲ್ಲಿ, ಮೊರಾರ್ಜಿ ದೇಸಾಯಿ ಅವರು 1962 ರಿಂದ 1969 ರವರೆಗೆ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ.ಹೊಸ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳ ವಿನಾಯಿತಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಊಹಾಪೋಹಗಳಿವೆ. ನಿರೀಕ್ಷಿತ ತೆರಿಗೆ ರಿಯಾಯಿತಿಗಳು, ಹೊಸ ಮತ್ತು ಹಳೆಯ ತೆರಿಗೆ ಸ್ಲ್ಯಾಬ್‌ಗಳಿಗೆ ಪರಿಷ್ಕರಣೆಗಳು, ಪ್ರಮಾಣಿತ ಕಡಿತದಲ್ಲಿನ ಹೆಚ್ಚಳ ಮತ್ತು ಪರಿಚ್ಛೇದ 80C ಮತ್ತು 80D ಅಡಿಯಲ್ಲಿ ಮಿತಿಗಳಲ್ಲಿ ಹೆಚ್ಚಳ ಸೇರಿವೆ. ಅಲ್ಲದೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ತೆರಿಗೆಗೆ ಬದಲಾವಣೆಗಳನ್ನು ಸಹ ನಿರೀಕ್ಷಿಸಲಾಗಿದೆ.
ಅಲ್ಲದೆ, ಮೂಲಸೌಕರ್ಯ ಅಭಿವೃದ್ಧಿ ಸರ್ಕಾರದ ದೀರ್ಘಾವಧಿಯ ಆದ್ಯತೆಯ ರೂಪದಲ್ಲಿ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಮೂಲಸೌಕರ್ಯದಲ್ಲಿನ ಹೂಡಿಕೆಗಳು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ರಸ್ತೆಗಳು, ರೈಲ್ವೇಗಳು, ವಿಮಾನ ನಿಲ್ದಾಣಗಳು ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳ ಬಗ್ಗೆ ಒತ್ತು ನೀಡುವ ನಿರೀಕ್ಷೆಗಳಿವೆ.
ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು, ವಿಶೇಷವಾಗಿ ಯುವಕರಿಗೆ ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಬೆಂಬಲಿಸಲು ಸರ್ಕಾರವು ಬಜೆಟ್ ನಲ್ಲಿ ವಿವಿಧ ಕ್ರಮಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇದು ನಿರುದ್ಯೋಗ ಕಡಿಮೆ ಮಾಡಲು ಮತ್ತು ಆಧುನಿಕ ಆರ್ಥಿಕತೆಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಿಗಳ ಲಭ್ಯತೆಗೆ ಅತ್ಯಗತ್ಯ.
ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ವಾರ್ಷಿಕ 6,000 ರೂ.ಗಳ ನೆರವಿನಲ್ಲಿ ಸಂಭಾವ್ಯ ಹೆಚ್ಚಳ ಸೇರಿದಂತೆ ರೈತರ ಆದಾಯವನ್ನು ಹೆಚ್ಚಿಸುವ ಕ್ರಮಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಬಹುದು ಎಂದು ತಜ್ಞರು ನಿರೀಕ್ಷಿಸುತ್ತಾರೆ. ಒಟ್ಟಾರೆ ಆರ್ಥಿಕತೆಗೆ ಕೃಷಿ ಕ್ಷೇತ್ರವನ್ನು ಬೆಂಬಲಿಸುವುದು ಅತ್ಯಗತ್ಯ, ಏಕೆಂದರೆ ಇದು ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಜೀವನೋಪಾಯವನ್ನು ಒದಗಿಸುತ್ತದೆ ಹಾಗೂ ಆಹಾರ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ.ವಿಶೇಷವಾಗಿ ರಕ್ಷಣಾ ವಲಯದಲ್ಲಿ ಸ್ಥಳೀಯ ಉತ್ಪಾದನೆ, ನಿರೀಕ್ಷಿತ ಗಮನದ ಮತ್ತೊಂದು ಕ್ಷೇತ್ರವಾಗಿದೆ. ಸರ್ಕಾರವು ಆಮಾಮದುಗಳದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುತ್ತಿದೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕತೆಯನ್ನು ಬಲಪಡಿಸುವುದು, ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವುದು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಇರಿಸಲು ಸಹಾಯ ವಾಗುವಂತಹ ಘೋಷಣೆಗಳನ್ನು ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ.
ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶಗಳ ನಂತರ ಬಜೆಟ್ ಕೆಲವು ಜನಪರ ಕ್ರಮಗಳನ್ನು ಒಳಗೊಂಡಿರಬಹುದಾದರೂ, ವಿತ್ತೀಯ ಬಲವರ್ಧನೆಗೆ ಸರ್ಕಾರವು ತನ್ನ ಬದ್ಧತೆಗೆ ಅಂಟಿಕೊಳ್ಳಬಹುದು ಎಂದು ತಜ್ಞರು ನಂಬಿದ್ದಾರೆ.ಉದ್ಯಮ ಸಂಸ್ಥೆಗಳಾದ ಇಂಡಿಯನ್ ಸ್ಪೇಸ್ ಅಸೋಸಿಯೇಷನ್ (ISpA) ಉಪಗ್ರಹ ಉಡಾವಣಾ ಸೇವೆಗಳ ಮೇಲಿನ GST ಮನ್ನಾವನ್ನು ಉಪಗ್ರಹಗಳು, ತಳಮಟ್ಟದ ವ್ಯವಸ್ಥೆಗಳು ಮತ್ತು ಉಡಾವಣಾ ವಾಹನಗಳ ಇತರ ನಿರ್ಣಾಯಕ ಘಟಕಗಳಿಗೆ ವಿಸ್ತರಿಸಲು ಕೋರಿದೆ. ದೀರ್ಘಾವಧಿಯ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸಿನ ಶಿಸ್ತಿನೊಂದಿಗೆ ಜನಪ್ರಿಯ ಕ್ರಮಗಳನ್ನು ಸಮತೋಲನಗೊಳಿಸುವ ಕ್ರಮಕ್ಕೆ ಬಜೆಟ್ ಒತ್ತು ನೀಡಬಹುದು ಎಂಬುದು ಅವರ ನಿರೀಕ್ಷೆ.
ಮಂಗಳವಾರ ಕೇಂದ್ರದಬಜೆಟ್ ಅನಾವರಣಗೊಳ್ಳಲಿದ್ದು, ಜನಸಾಮಾನ್ಯರ, ಉದ್ಯಮದ ಹಾಗೂ ಕೃಷಿ ವಲಯದ ನಿರೀಕ್ಷೆಗಳು ಹೇಗೆ ಈಡೇರುತ್ತವೆ ಎಂಬುದನ್ನು ಕಾದು ನೀಡಬೇಕಿದೆ.