ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಕಾಮತ್ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ.

ಇಂಗ್ಲೀಷ್-94, ಸಂಸ್ಕೃತ 100, ಭೌತಶಾಸ್ತ್ರ-99, ರಸಾಯನಶಾಸ್ತ 100, ಗಣಿತಶಾಸ್ತ-99, ಗಣಕ ವಿಜ್ಞಾನ- 99 ಪಡೆದು 98.66 ಶೇಕಡಾ ಸಾಧನೆ ಮಾಡಿರುತ್ತಾಳೆ.

ನಾಲ್ಕೂರು ಗ್ರಾಮದ ಮುದ್ದೂರಿನ ದಿನೇಶ್ ಕಾಮತ್ ಮತ್ತು ದೀಪಾ ಕಾಮತ್ ಇವರ ಸುಪುತ್ರಿಯಾಗಿರುವ ಈಕೆ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿಕೊಳ್ಳುತ್ತಾ, ಶಿಶು ಶಿಕ್ಷಣದಿಂದ ಹಿಡಿದು ಪಿಯುಸಿವರೆಗಿನ ತನ್ನ ಸಂಪೂರ್ಣ ಶಿಕ್ಷಣ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿಯೇ ಮಾಡಿದ್ದು, ಈ ಸಂಸ್ಥೆಯ ಬಗ್ಗೆ ಹೆಮ್ಮೆ ಇದೆ. ಯಾವುದೇ ವಿಷಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ, ಅದು ನನಗೆ ಉತ್ತಮ ಅಂಕಗೊಳಿಸಲು ಸಹಾಯವಾಯಿತು. ರಜಾ ದಿನಗಳಲ್ಲಿ 8 ರಿಂದ 10 ಗಂಟೆ, ಕಾಲೇಜು ದಿನಗಳಲ್ಲಿ 3 ರಿಂದ 4 ಗಂಟೆ ಪ್ರತಿನಿತ್ಯ ಇಷ್ಟಪಟ್ಟು ಓದುತ್ತಿದ್ದೆ. ಸಂಪೂರ್ಣ ಪ್ರೋತ್ಸಾಹ ನೀಡಿದ ತಂದೆ- ತಾಯಿ ಹಾಗೂ ಉಪನ್ಯಾಸಕ ವೃಂದದವರಿಗೆ ಸದಾ ಚಿರಋಣಿ ಎಂದರು.

ಭವಿಷ್ಯದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸನ್ನು ಹೊತ್ತಿರುವುದಾಗಿ ತಿಳಿಸಿದರು.