ಬೆಳಗಾವಿ :
ಚಿಕ್ಕೋಡಿ ವಿಭಾಗದಿಂದ ಆಂಜನಾದ್ರಿ ಬೆಟ್ಟಕ್ಕೆ 43 ವಾಹನಗಳು ಹಾಗೂ ಶಾಲಾ ಶೈಕ್ಷಣಿಕ ಪ್ರವಾಸಕ್ಕಾಗಿ 47 ವಾಹನಗಳು ಹೀಗೆ ಒಟ್ಟು 90 ವಾಹನಗಳು ಡಿ.23 ರಿಂದ ಡಿ,24 ರ ವರೆಗೆ ವಿವಿಧ ಘಟಕಗಳಿಂದ ಸಾಂದರ್ಭಿಕ ಒಪ್ಪಂದದ ಮೇಲೆ ನೀಡಲಾಗುತ್ತಿದ್ದು, ಈ ಕಾರಣದಿಂದಾಗಿ ವಿಭಾಗದಲ್ಲಿ ವಾಹನಗಳ ಕೊರತೆಯಾಗುವುದರಿಂದ ಎರಡು ದಿನಗಳ ಕಾಲ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.