Join The Telegram | Join The WhatsApp |
ಬೆಳಗಾವಿ-
ಬೆಳಗಾವಿಯ ಕಾಹೆರ್‍ನ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪ್ರೊಸ್ಟೊಡಾಂಟಿಕ್ಸ್ ಕ್ರೌನ್ ಮತ್ತು ಬ್ರಿಡ್ಜ್ ಇಂಪ್ಲಾಂಟಾಲಜಿ ವಿಭಾಗದಿಂದ ವಿಶ್ವ ಪ್ರೊಸ್ಟೊಡಾಂಟಿಕ್ಸ್ ದಿನ ಆಚರಿಸಲಾಯಿತು.
ಸಮಾರಂಭವನ್ನ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಶರೀರದ ಆರೋಗ್ಯ ವೃದ್ದಿಯಲ್ಲಿ ಬಾಯಿಯ ಮಹತ್ವ ಮತ್ತು ವಹಿಸಬೇಕಾದ ಕ್ರಮ ಹಾಗು ಈ ನಿಟ್ಟಿನಲ್ಲಿ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯವು ಜನರಿಗಾಗಿ ವಹಿಸಿರುವ ಜವಾಬ್ದಾರಿ ಕುರಿತು ತಿಳಿಸಿದರು.
ಈ ನಿಮಿತ್ತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಸಿಕ್ ಇಂಪ್ಲಾಂಟ್ ಕಾರ್ಯಗಾರ, ವೃದ್ದಾಶ್ರಮಗಳಲ್ಲಿ ವಯೋಸಹಜ ಹಾರೈಕೆ ಶಿಬಿರ ನಡೆಸಲಾಯಿತು. ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಚಿತ್ರ/ಶೈಕ್ಷಣಿಕ ವಿಡಿಯೋ ತಯಾರಿಕೆ ಸ್ಪರ್ದೆ ಮತ್ತು ಇಂಟರ್ನಿಗಳಿಗೆ ಪ್ಲಾಸ್ಟರ್ ಟು ಮಾಸ್ಟರ್ ಚಟುವಟಿಕೆಯನ್ನ ಆಯೋಜಿಸಲಾಗಿತ್ತು. ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರೊಸ್ಟೊಡಾಂಟಿಕ್ಸ್ ಚಿಕಿತ್ಸೆಯ ಕುರಿತು ವಿಡಿಯೋ ಮುಖಾಂತರ ಸಾಮಾಜಿಕ ಅರಿವು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಪ್ರೊಸ್ಟೊಡಾಂಟಿಕ್ಸ್ ವಿಭಾಗದಲ್ಲಿ ಸಾಧನೆಗೈದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನ ಪುರಸ್ಕರಿಸಿ ಗೌರವಿಸಲಾಯಿತು.
ಬಡವರಿಗೆ ಮತ್ತು ಅವಶ್ಯಕತೆ ಇರುವ 52 ಜನ ಫಲಾನುಭವಿಗಳನ್ನ ಗುರುತಿಸಿ ಸಂಪೋರ್ಣ ಉಚಿತವಾಗಿ ಕೃತಕ ದಂತ ಪಂಕ್ತಿಯನ್ನ ವಿತರಿಸಲಾಯಿತು.
ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ, ಡಾ.ಸೋನಾಲ್ ಜೋಶಿ, ಡಾ.ಅನಂದ ಕುಮಾರ ಜಿ. ಪಾಟೀಲ ಹಾಗು ಇತರೆ ಹಿರಿಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಈ ಎಲ್ಲಾ ಚಟುವಟಿಕೆಗಳು ನಡೆದವು.
Join The Telegram | Join The WhatsApp |