ಬೆಳಗಾವಿ : ಬೆಳಗಾವಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ, ಡಾ.ವೆಂಕನಗೌಡ ಭಿ ಬಿ ಪಾಟೀಲ್ ಇವರು ಪ್ರೊ.ಕೆ.ಎನ್.ಲೋಕೇಶ್ (ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ತಂದೆ) ಹಾಗೂ ಡಾ. ವಿನೋತ್ ಶ್ರೀನಿವಾಸನ್ ಇವರ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿ ಜಲಾನಯನ ಪ್ರದೇಶದ ಕಣವೀಹಳ್ಳ ಉಪಜಲಾನಯನದ ಅಂತರ್ಜಲ ಅಭಿವೃದ್ಧಿ ಕುರಿತ‌ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಸಂಸ್ಥೆಯಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸುರತ್ಕಲ್, ಪಿ.ಎಚ್.ಡಿ. ಪ್ರದಾನ ಮಾಡಿದೆ.

ಇವರು ಮೂಲತಃ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹೊಸ ಯರಗುದ್ರಿ‌ ಗ್ರಾಮದವರಾದ ಭೀಮನಗೌಡ ಹಾಗೂ ನಿರ್ಮಲ ದಂಪತಿಗಳ ಪುತ್ರ.