ಬೆಳಗಾವಿಯಲ್ಲಿ ಕಿತ್ತೂರು ರಾಣಿ
ಚೆನ್ನಮ್ಮಾಜಿಯ ವಿಜಯೋತ್ಸವ
ಆಚರಣೆ: ಚೆನ್ನಮ್ಮಾಜಿ,ಸಂಗೊಳ್ಳಿ
ರಾಯಣ್ಣ ಪ್ರತಿಮೆಗಳಿಗೆ ಪೂಜೆ,
ಗೌರವ ಅರ್ಪಣೆಬ್ರಿಟಿಷರ ವಿರುದ್ಧ ಮೊಟ್ಟ ಮೊದಲು
ಬಂಡಾಯದ ಕಹಳೆ ಊದಿದ ಕಿತ್ತೂರು
ರಾಣಿ ಚೆನ್ನಮ್ಮಾಜಿ 1824 ರ
ಅಕ್ಟೋಬರ 23 ರಂದು ಬ್ರಿಟಿಷರಿಗೆ
ಸೋಲಿನ ರುಚಿ ತೋರಿಸಿ ವಿಜಯದ
ಪತಾಕೆ ಹಾರಿಸಿದ ಸ್ಮರಣಾರ್ಥ
ಇಂದು ವಿಜಯೋತ್ಸವವನ್ನು
ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ವತಿಯಿಂದ ಆಚರಿಸಲಾಯಿತು.
ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ
ಪ್ರತಿಮೆಗೆ ಹಾಗೂ ಜಿಲ್ಲಾಧಿಕಾರಿ
ಕಚೇರಿ ಆವರಣದಲ್ಲಿರುವ ವೀರ
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ
ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ
ಚಂದರಗಿ, ದೇಶದಲ್ಲಿಯೇ ಮೊಟ್ಟ ಮೊದಲ
ಬಾರಿಗೆ ಬ್ರಿಟಿಷರ ವಿರುದ್ಧ ಬಂಡಾಯದ
ಬಾವುಟ ಹಾರಿಸಿದ ಚೆನ್ನಮ್ಮಾಜಿಗೆ
ಸಿಗಬೇಕಾಗಿದ್ದ ಗೌರವ ಇನ್ನೂ ಸಿಕ್ಕಿಲ್ಲ.
1857 ರಲ್ಲಿ ಬ್ರಿಟಿಷರ ವಿರುದ್ಧ
ಸಿಡಿದೆದ್ದ ಝಾಂಸಿ ರಾಣಿ ಲಕ್ಷ್ಮೀಬಾಯಿಗಿಂತ
35 ವರ್ಷಗಳಷ್ಟು ಮೊದಲೇ ಚೆನ್ನಮ್ಮಾಜಿ
ಕ್ರಾಂತಿಯ ಕಿಡಿ ಹೊತ್ತಿಸಿದ್ದಾರೆ ಎಂದರು.
ದೇಶದಾದ್ಯಂತ ಚೆನ್ನಮ್ಮಾಜಿಗೆ
ಸಿಗಬೇಕಾದ ಮಹತ್ವ ಹಾಗೂ ಗೌರವ
ಸಿಗುವಂತೆ ರಾಜ್ಯದ ರಾಜಕೀಯ
ಮುಖಂಡರು ಮಾಡಬೇಕಾಗಿದೆ ಎಂದು
ಚಂದರಗಿ ಹೇಳಿದರು.