Join The Telegram | Join The WhatsApp |
ಬೆಂಗಳೂರು:
ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ‘ವಿಜಯಾನಂದ’ ಸಿನಿಮಾವನ್ನು ಮಾಡಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮಾ. ಈ ಸಿನಿಮಾವನ್ನು ಆನಂದ್ ಸಂಕೇಶ್ವರ ನಿರ್ಮಾಣ ಮಾಡಿದ್ಧಾರೆ. ಈಗ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ಪ್ಯಾನ್ ಇಂಡಿಯಾ ‘ವಿಜಯಾನಂದ’ ಸಿದ್ಧವಾಗಿದೆ. ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ನಿರ್ದೇಶಕಿ ರಿಷಿಕಾ ಶರ್ಮಾ ಮಾಡಿದ್ದಾರೆ. ವಿಜಯ್ ಸಂಕೇಶ್ವರ ಅವರ ಪಾತ್ರದಲ್ಲಿ ನಟ ನಿಹಾಲ್ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಹಾಡನ್ನು ರಿಲೀಸ್ ಮಾಡಿರುವ ಚಿತ್ರತಂಡ, ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಿದೆ. ಡಿಸೆಂಬರ್ 9 ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ವಿಜಯ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ. ಅವರು ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಅವರಿಗೆ ವಯಸ್ಸಿನ ಹಂಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರಿದರು.
ವಿಜಯ ಸಂಕೇಶ್ವರ ಅವರು ಯಾವಾಗಲೂ ಅಡ್ವೆಂಚರ್ ಮಾಡುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅಂತ ಹೇಳುತ್ತದೆಯೋ ಅಲ್ಲಿಗೆ ಅವರು ಹೋಗುತ್ತಾರೆ. ಯಾವುದು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡುತ್ತಾರೆ. ಅವರು ನೋ ಎನ್ನುವುದು ಸ್ಪಷ್ಟವಾಗಿ ಹೇಳುತ್ತಾರೆ. ನೋ ಎನ್ನುವುದು ಎಲ್ಲರಿಗೂ ಆಗುವುದಿಲ್ಲ. ಅವರು ಯಶಸ್ವಿ ಆಗಿರುವುದು ಸರಿ ತಪ್ಪು ಹೇಳಿದ್ದರಿಂದ ಮತ್ತು ಸಮಯ ಪ್ರಜ್ಞೆಯಿಂದ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸತ್ಯವನ್ನೇ ಹೇಳಿದರೂ, ಜನ ಬೆಂಬಲಿಸಿ ಮೂರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದರು. ಅವರಿಗೆ ಬಹಳ ಜನ ಪತ್ರಿಕೆ ತೆರೆಯಬೇಡ ಅಂತ ಹೇಳಿದ್ದರು. ಆದರೂ ಅವರು ಅದನ್ನು ಆರಂಭಿಸಿ ಯಶಸ್ವಿಯಾದರು.
ಅವರು ಪತ್ರಿಕೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು. ಅದರಲ್ಲಿ ನಷ್ಟ ಅನುಭವಿಸಿದರೂ ಅವರು ಅದನ್ನು ಹೇಗೆ ಯಶಸ್ವಿ ಮಾಡಬೇಕೆಂಬ ಸತ್ಯ ಗೊತ್ತಿತ್ತು. ಲಾಜಿಸ್ಟಿಕ್ಸ್ ನಲ್ಲಿಯೂ ಯಶಸ್ವಿಯಾಗಿದ್ದಾರೆ. ನಮ್ಮ ಕಡೆ ಒಂದು ಗಾದೆ ಮಾತು ಇದೆ. ಯಾರನ್ನಾದರೂ ಮುಗಿಸಬೇಕು ಎಂದರೆ ಹಳೆ ಲಾರಿ ಕೊಟ್ಟು ನೋಡಿ ಅಂತ ಎಂದು ಹೇಳಿ ಸಿಎಂ ಬಸವರಾಜ ಬೊಮ್ಮಾಯಿ ನಗೆ ಚಟಾಕಿ ಹಾರಿಸಿದರು.
ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು
ವಿಜಯ ಸಂಕೇಶ್ವರ ಅವರ ಬದುಕೇ ಒಂದು ರೀತಿ ಅದ್ಬುತ, ಅದ್ಬುತ. ಅವರ ಬಗ್ಗೆ ಸಿನೆಮಾ ಮಾಡಿದ್ದು ಒಳ್ಳೆಯದ್ದಾಗಿದೆ. ಅವರ ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಅನ್ನುವುದು ನನ್ನ ಬಯಕೆ. ಅವರಿಗೆ ಎಂಎಲ್ ಸಿ ಮಾಡಿದಾಗ ಅವರು ಇಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದಿಲ್ಲ ಅಂತ ರಾಜೀನಾಮೆ ನಿಡಿದರು. ಅವರು ಅತ್ಯಂತ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ.
ಅವರು ಫ್ಲೈಟ್ ತೆಗೆದುಕೊಂಡು ಲಾಭ ಮಾಡಿದ್ದಾರೆ. ಅವರಿಗೆ ದೇಶ, ಧರ್ಮದ ಬಗ್ಗೆ ಅಪಾರವಾದ ಗೌರವ ನಂಬಿಕೆ ಇದೆ. ಅವರು ಕಾಯಕ ನಂಬಿದವರು. ಅವರು ಸವಾಲು ಎದುರಿಸಿದಾಗ ಕಾಯಕ ಶಕ್ತಿ ಅವರನ್ನು ಕೈ ಹಿಡಿದಿದೆ. ರಾಜ್ಯದಲ್ಲಿ ಒಬ್ಬ ಕಾಯಕ ಜೀವಿ , ಇದು ಡಿಸೆಂಬರ್ 9 ರಂದು ಸಿನೆಮಾ ಬಿಡುಗಡೆ ಆಗಲಿದ್ದು, 1400. ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗಲಿದೆ. ಹೊರ ದೇಶ ಅಮೆರಿಕದಲ್ಲಿ 200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನೆಮಾ ಎಲ್ಲರಿಗೂ ಪ್ರೇರಣೆ ಆಗಲಿ ಈ ಚಿತ್ರದಿಂದ ರಾಜ್ಯದಲ್ಲಿ ನೂರು ವಿಜಯಾನಂದರು ಹುಟ್ಟಲಿ. ಈ ಚಿತ್ರ ಯಶಸ್ಬಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ವಿಆರ್ ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ವಿಜಯ್ ಸಂಕೇಶ್ವರ್, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ್, ಆನಂದ ಸಂಕೇಶ್ವರ, ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ ಹಾಜರಿದ್ದರು.
Join The Telegram | Join The WhatsApp |