
ಸುಳ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಸಲ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ಹಾರೈಸಿ ಇಲ್ಲಿನ ಜಯನಗರ ಬೂತ್ ಸಮಿತಿ ಹರಕೆ ರೂಪದಲ್ಲಿ ಶನಿವಾರ ನೆರವೇರಿಸಿದ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಕಿಶೋರ್ ಕುಮಾರ್ ಪುತ್ತೂರು, ಪಕ್ಷದ ಮುಖಂಡ ಎಸ್.ಅಂಗಾರ, ದೈವಸ್ಥಾನದ ಪ್ರಮುಖರಾದ ಕೇಶವ ಮಾಸ್ತರ್ ಹೊಸಗದ್ದೆ, ಜಿ.ಜಗನ್ನಾಥ ಜಯನಗರ, ಬಿಜೆಪಿಯ ಸುಳ್ಯ ಪಟ್ಟಣ ಘಟಕದ ಅಧ್ಯಕ್ಷ ಎ.ಟಿ.ಕುಸುಮಾಧರ ಭಾಗವಹಿಸಿದ್ದರು.