ಪುತ್ತೂರು: ಸರಕಾರಿ ಶಾಲಾ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿ ಪ್ರಾ ಶಾಲೆಯ ಮುಖ್ಯ ಶಿಕ್ಷಕಿಗೆ ಶಿಕ್ಷಣ ಇಲಾಖೆಯಿಂದ ನೊಟೀಸ್ ಜಾರಿ‌ಮಾಡಲಾಗಿದೆ.

ಜ.7 ರಂದು ಸಂಜೆ ಮಣಿಕ್ಕರ ಸರಕಾರಿ ಹಿ ಪ್ರಾ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನೂತನ ಕಟ್ಟಡವನ್ನು ಉದ್ಘಾಟನೆ ಮಾಡುವ ವೇಳೆ ಶಿಕ್ಷಕಿ ಸರಕಾರಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದು ಮಾತ್ರವಲ್ಲದೆ ಶಿಷ್ಟಾಚಾರ ವ್ಯಾಪ್ತಿಗೆ ಒಳಪಡದ ವ್ಯಕ್ತಿಯಿಂದ ಉದ್ಘಾಟನೆ ಮಾಡಿಸಿದ್ದರು. ಶಾಸಕರು ಉದ್ಘಾಟನೆಗೆ ತೆರಳುವ ವೇಳೆ ಕಾರ್ಯಕ್ರಮ ಮುಗಿದಿತ್ತು. ಈ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಶಾಸಕ ಅಶೋಕ್ ರೈ ಅವರು ಪ್ರಶ್ನಿಸಿದ್ದರು. ಶಿಕ್ಷಣ ಇಲಾಖೆಯಿಂದ ಮುಖ್ಯ ಶಿಕ್ಷಕಿಗೆ ನೊಟೀಸ್ ಜಾರಿ‌ಮಾಡಲಾಗಿದ್ದು ಕಚೇರಿಗೆ ಖುದ್ದು ಹಾಜರಾಗಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.