
ದುಬೈ : ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮುನ್ನ ಅಭ್ಯಾಸದ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಗಾಯ ಗಂಭೀರವಾಗಿಲ್ಲ, ಕೊಹ್ಲಿ ಆಡುವ ನಿರೀಕ್ಷೆಯಿದೆ. ಐತಿಹಾಸಿಕವಾಗಿ, ನ್ಯೂಜಿಲೆಂಡ್ ಭಾರತಕ್ಕೆ ಕಠಿಣ ಎದುರಾಳಿಯಾಗಿದ್ದು, ಐಸಿಸಿ ಪಂದ್ಯಾವಳಿಗಳಲ್ಲಿ 10-6 ಮುನ್ನಡೆಯನ್ನು ಹೊಂದಿದೆ. ಆದರೆ ದುಬೈ ಭಾರತದ ಪಾಲಿಗೆ ತವರಿನ ಅಂಗಳದಂತೆ ಇದ್ದು ಇಲ್ಲಿ ಭಾರತ ಅದೃಷ್ಟ ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ.