ದೆಹಲಿ : ಕಾಳಮ್ಮವಾಡಿ (ಮಹಾರಾಷ್ಟ್ರದ) ಜಲಾಶಯದಿಂದ ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನೆಲೆ, ಜಲಾಶಯವನ್ನು ಅವಲಂಬಿಸಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಬೆಳಗಾವಿ ಗಡಿಯಲ್ಲಿರುವ ಕಾಳಮ್ಮವಾಡಿ ಜಲಾಶಯವನ್ನು ದೂದ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ 1.5 ಟಿಎಂಸಿ ಸಾಮರ್ಥ್ಯ ಹೊಂದಿದೆ. ಇನ್ನೂ ಮಹಾರಾಷ್ಟ್ರ ಸರ್ಕಾರ ಖಾಸಗಿ ಕಂಪನಿಯ ಸಹಕಾರದೊಂದಿಗೆ ಡ್ಯಾಂ ದುರಸ್ಥಿಗೆ ಮುಂದಾಗಿದೆ ಎನ್ನಲಾಗಿದೆ.