Join The Telegram | Join The WhatsApp |
(ನಾನು ಕಂಡಂತೆ ಬ್ರಹ್ಮ ಕುಮಾರೀಸ್)
ನೇರ ವರದಿ ಬರಹ
ಮೌಂಟ್ ಅಬು ವಿನ ಶಿಖರ ಕಣಿಗಳು ಪ್ರಜಾಪಿತ ಬ್ರಹ್ಮ ಕುಮಾರೀಸ್ ಮುಖ್ಯ ಕೇಂದ್ರ ಶಾಂತಿವನದಿಂದ……
ಬರಹ: ಲೇಖನ: ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ…..
21/02/2023….ಆರನೇ ದಿನ
ಹಣ ಯಾರಿಗೆ ಬೇಡ ಹೇಳಿ ? ಹಣ ನಮ್ಮ ಜೀವನದ ಒಂದು ಭಾಗ! ಆದರೆ ಹಣವೇ ಜೀವನವಾ?* ಹಣವು ಜೀವನಕ್ಕೆ ಬೇಕು!ಹೌದೋ ಅಲ್ಲವೋ? ಇಂದು ಹಣವಿಲ್ಲದೆ ಜೀವನ ಸಾಕಾಗಿದೆ ಅಂತ ಲಕ್ಷಾಂತರ ಜನರು ಹೇಳುವವರೂ ಇದ್ದಾರೆ.ಆದರೆ ಈಶ್ವರೀಯ ವಿದ್ಯಾಲಯ ಹಣವು ಜೀವನಕ್ಕೆ ಒಂದು ಭಾಗ ಆಗಬೇಕು ಹಣವೇ ಜೀವನ ಶೈಲಿ ಅಲ್ಲ ಎಂದು ಜಗತ್ತಿಗೆ ಸಾರಿ ಸಾರಿ ಹೇಳುತ್ತಿದೆ.
ಹಣದಿಂದ ನಮ್ಮ ಕೆಲವು ಆಸೆಗಳು ಈಡೇರುತ್ತದೆ.ಆದರೆ ಹಣದಿಂದಲೇ ಎಲ್ಲವೂ ಸಿಗೋದಿಲ್ಲ! ಹಣದಿಂದ ಆರೋಗ್ಯ ಸಿಗೋದಿಲ್ಲ! ಹಣದಿಂದ ಸಂಬಂಧವೂ ಸಿಗೋದಿಲ್ಲ!ಆದರೆ ಹಣ ಇಲ್ಲದೆ ಹೋದರೆ ಮೂರು ಕಾಸಿನ ಬೆಲೆಯೂ ಇರೋಲ್ಲ!ಹಣ ಬೇಕು ಆದರೆ ಹಣವೇ ಜೀವನ ಶೈಲಿ ಅಲ್ಲ! ಆದ್ದರಿಂದ ಈ ಹಣ ಸೃಷ್ಟಿ ಯನ್ನು ಯಾವ ರೀತಿ ಆಟ ಆಡಿಸುತ್ತದೆ. *ಸಂಪತ್ತು ವೈಭೋಗ ಸುಖ ಸಾಮ್ರಾಜ್ಯದ ಕನಸಿಗೆ ಹಣದ ಸಂಪಾದನೆ ವ್ಯವಹಾರದ* ವೈಖರಿಗಳೇ ಭದ್ರ ಬುನಾದಿ!ಆದರೆ ಮಾನಸಿಕ ಆರೋಗ್ಯ ಕ್ಕಾಗಿ ನೆಮ್ಮದಿ ಗಾಗಿ ಸುಖ ಸೌಹಾರ್ದತೆ ಸಾಮ್ರಾಜ್ಯ ಕ್ಕಾಗಿ ನಾವು ಪ್ರತಿ ಬಾರಿ ಹಣವನ್ನು ನಂಬಿಕೊಂಡು ಸಾಗುತ್ತೇವೆ.ಹಣದ ಬಲವೇ ಎಲ್ಲವನ್ನೂ ತಂದುಕೊಡುತ್ತದೆ.ಅದನ್ನೇ ನಂಬಿಕೊಂಡು ಸಾಗುತ್ತೇವೆ.ಹಾಗಾಗಿ ನಮಗೆ ಹಣವೇ ಜೀವನ!
ಸ್ವಲ್ಪ ನಮಗೆ ನಮ್ಮ ಆಲೋಚನೆಗಳನ್ನು ಬದಲಾವಣೆ ಕಂಡುಕೊಂಡು ಸಾಗಬೇಕಾದ ಅವಶ್ಯಕತೆ.ಹಣ ಕ್ಕಿಂತಲೂ ಮುಖ್ಯ ಗೌರವ! ಆಶೀರ್ವಾದ! ಸ್ನೇಹ! ಪ್ರೀತಿ! ವಿಶ್ವಾಸ!ಸಮಯ!ಕರುಣೆ! ಮಾನವೀಯ ಮೌಲ್ಯ! ಹೀಗೆ ಹತ್ತು ಹಲವಾರು ಜ್ಞಾನ ದ ಮಡಿಲುಗಳೇ ಮಿಗಿಲು!ಅದನ್ನೇ ಈಶ್ವರೀಯ ಆಂತರೀಕ ಅರ್ಥ ಹೇಳೋದು! *ಬದುಕಿನ ವ್ಯವಸ್ಥೆ ಯನ್ನು ಸಂಪೂರ್ಣ ಉಪಯೋಗಿಸಿ ಕೊಳ್ಳಬೇಕಾದರೆ ಆಂತರೀಕವಾದ* ಜ್ಞಾನೋದಯ ಅಗತ್ಯವಿದೆ.ಜ್ಞಾನ ಅಂದರೆ ಅದಕ್ಕೆ ಬದುಕು ಹೀಗೆ ಪ್ರಕೃತಿ ಸೌಂದರ್ಯ ಬದುಕಬೇಕೆಂದು ಈಶ್ವರೀಯ ನಿಯಮ ಗಳಿದೆ.ಆದ್ದರಿಂದ ಜೀವನಕ್ಕೆ ಹಣ ಬೇಕೇ ಬೇಕು!ಆದರೆ ಹಣ ಬೇಕು ಎಂದು ಬದುಕೇ ಹಣದ ಮೋಹದಲ್ಲಿ ತೇಲದಿರಲಿ.ಆಂತರೀಕವಾದ ನೆಮ್ಮದಿ ಗೆ ಶಾಂತಿ ವೋಂದೇ ಪರಿಹಾರ! ಆಂತರಿಕವಾಗಿ ಬದಲಾವಣೆ ಕಂಡುಕೊಂಡು ಸಾಗಬೇಕು.ಅದಕ್ಕಾಗಿ ಈಶ್ವರೀಯ ಏಳು ದಿನಗಳ ಉಚಿತ ಶಿಕ್ಷಣ ರಾಷ್ಟ್ರೀಯ ಮಟ್ಟದ ಅಂತಾರಾಷ್ಟ್ರೀಯ ಮಟ್ಟದ ಸುಮಾರು ಎಂಟು ಸಾವಿರಕ್ಕೂ ಅಧಿಕ ಶಿಕ್ಷಣ ಕೇಂದ್ರ ಗಳಲ್ಲಿ ಪ್ರತಿ *ನಿತ್ಯ ವೂ ಬೆಳಿಗ್ಗೆ ಆರರಿಂದ ಎಂಟರವರೆಗೆ ಮತ್ತು ಸಂಜೆ 6 ರಿಂದ 8 ನುರಿತ ಶಿಕ್ಷಕರಿಂದ ಕಲಿಸಿಕೊಡಲಾಗುತ್ತದೆ.ಸಾಮಾಜಿಕ* ಜಾಲತಾಣದ ಮೂಲಕ ಕಲಿಸಿಕೊಡಲಾಗುತ್ತದೆ.ಆನ್ ಲೈನ್ ತರಗತಿಗಳ ಮೂಲಕ ಕಲಿಸಿಕೊಡಲಾಗುತ್ತದೆ.ಕೊನೆಗೂ ಹೊಳೆಯುವ ಸತ್ಯ “ಭಗವದ್ಗೀತೆ”ಎಂಬಾ ಮಹಾ ಗ್ರಂಥದಲ್ಲಿ ಹುದುಗಿ ಹೋದ ಸತ್ಯವಾದ ರಹಸ್ಯ ಗಳೇ ಅಧ್ಯಾತ್ಮ ಶಿಕ್ಷಣ ವೇ ಇಡೀ ಜಗತ್ತಿಗೆ ಹೊಸ ಶಿಕ್ಷಣ ನೀಡುವ ಜಾತ್ಯತೀತ ಧರ್ಮಾತೀತ ನಿಲುವುಗಳೇ ಬದುಕಿಗೆ ಭದ್ರ ಬುನಾದಿ!
ಈಶ್ವರೀಯ ನೈಜ ತಪಸ್ಸಿನ ಸಂದೇಶ ಪಡೆಯಿರಿ!ತಾವೂ ಹಾಗೂ ಸಪರಿವಾರ ಸುಂದರವಾಗಿ ನಗು ಜೀವನ ಪಡೆಯಿರಿ……
ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಅಧ್ಯಕ್ಷರು* ಕುಂದಾಪುರ ತಾಲೂಕು ಪತ್ರಕರ್ತರ ಸಂಘ (ರಿ.)ಕುಂದಾಪುರ.
9964183229/9620472014
Join The Telegram | Join The WhatsApp |