ನವದೆಹಲಿ: ರೈಲು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಲು ಭಾರತೀಯ ರೈಲ್ವೆ ಮುಂದಾಗಿದ್ದು, ಇದಕ್ಕಾಗಿ ಮುಂದಿನ ತಿಂಗಳು ‘ಸೂಪರ್ ಆ್ಯಪ್’ ಪರಿಚಯಿಸಲಿದೆ.

ರೈಲು ಟಿಕೆಟ್ ಬುಕಿಂಗ್, ಪ್ಲಾಟ್‌ಫಾರಂ ಟಿಕೆಟ್, ರೈಲು ಎಲ್ಲಿದೆ ಎಂಬ ಮಾಹಿತಿ, ಊಟದ ಸೇವೆ ಸೇರಿ ಹಲವು ಸೇವೆಗಳು ಒಂದೇ ಕಡೆ ಸಿಗುವಂತೆ ಮಾಡಲಾಗಿದೆ.

ಪ್ರಸ್ತುತ ವಿವಿಧ ಸೇವೆಗಳಿಗಾಗಿ ಪ್ರಯಾಣಿಕರು ವಿವಿಧ ಆ್ಯಪ್‌ಗಳನ್ನು ಬಳಕೆ ಮಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ಐಆರ್‌ಸಿಟಿಸಿಯೊಂದಿಗೆ ಸೇರಿ ಹೊಸ ವೇದಿಕೆ ಸೃಷ್ಟಿಸಿದೆ. ಐಆರ್‌ಸಿಟಿಸಿಯ ರೈಲ್ ಕನೆಕ್ಟ್ ಆ್ಯಪ್ ಪ್ರಸ್ತುತ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್‌ ಮಾಡಲು ಬಳಕೆ ಮಾಡಲಾಗುತ್ತಿದೆ. ಇದೀಗ ಸೂಪರ್ ಆ್ಯಪ್‌ನಲ್ಲೂ ಈ ಸೇವೆ ಲಭ್ಯವಾಗುವುದರಿಂದ ರೈಲ್ವೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.