Join The Telegram | Join The WhatsApp |
ರಾಮನಗರ :
ರಾಮನಗರ ಜಿಲ್ಲೆಯ ಚನ್ನಪಟ್ಟಣದ ನ್ಯಾಯಾಲಯದಲ್ಲಿ ಕಲಾಪದ ಸಂದರ್ಭದಲ್ಲಿ ಕುಡಿದು ಬಂದಿದ್ದ ಕಕ್ಷಿದಾರನಿಗೆ ನ್ಯಾಯಾಧೀಶರು ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಚನ್ನಪಟ್ಟಣದ ತಾಲ್ಲೂಕಿನ ಸುಮಾರು 45 ವರ್ಷದ ವ್ಯಕ್ತಿ ನ್ಯಾಯಾಲಯದಲ್ಲಿ ತಮ್ಮ ಜಮೀನಿನ ಪ್ರಕರಣಕ್ಕೆ ಕಕ್ಷಿದಾರರಾಗಿದ್ದು, ನ್ಯಾಯಾಲಯಕ್ಕೆ ಕುಡಿದು ಬಂದಿದ್ದನೆಂದು ಹೇಳಲಾಗಿದ್ದು, ಕಟಕಟ್ಟೆಯಲ್ಲಿದ್ದಾಗ ಆತನ ತೊದಲು ನುಡಿಗಳನ್ನು ಆಲಿಸಿದ ನ್ಯಾಯಾಧೀಶರು ಆತನಿಗೆ ದಂಡವಿಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯದೇವತೆಯ ಸ್ಥಾನವಾಗಿರುವ ಪವಿತ್ರವಾದ ನ್ಯಾಯಾಲಯದಲ್ಲಿ ಕುಡಿದು ಬಂದಿದ್ದಲ್ಲದೇ ಕಟಕಟ್ಟೆಯಲ್ಲಿಯೂ ನಿಂತು ಮಾತನಾಡಿದ ಆರೋಪಿಗೆ ದಂಡ ವಿಧಿಸಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು. ಕುಡಿದು ನ್ಯಾಯಾಲಯಕ್ಕೆ ಬಂದಿರುವ ವ್ಯಕ್ತಿಗೆ ದಂಡ ವಿಧಿಸಿರುವುದು ಪ್ರತಿಯೊಬ್ಬ ನಾಗರಿಕರಿಗೂ ಎಚ್ಚರಿಕೆ ಘಂಟೆಯಾಗಿದೆ.
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ.
Join The Telegram | Join The WhatsApp |