Join The Telegram | Join The WhatsApp |
ಬೆಂಗಳೂರು-
ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೊನೆಗೂ ಅವಕಾಶ ಸಿಕ್ಕಿದ್ದು, ಈ ಬಾರಿ ನಾಡಿನ ಹಿತಕ್ಕೆ ನಿಸ್ವಾರ್ಥ ಸೇವೆಗೈದ ಆದರ್ಶ ಮಹಿಳೆಯರಿಗೆ ಈ ಸ್ತಬ್ಧಚಿತ್ರವನ್ನು ಸಮರ್ಪಿಸಲಾಗುತ್ತಿದೆ.
ಈ ಬಾರಿಯ ರಾಜ್ಯದ ಸ್ತಬ್ಧಚಿತ್ರ ” ನಾರಿ ಶಕ್ತಿ” ಎಂದು ವಿಷಯದಲ್ಲಿದ್ದು, ಇದರಲ್ಲಿ ಪದ್ಮ ಪ್ರಶಸ್ತಿ ಪಡೆದಿರುವ ಮೂವರು ಹೆಮ್ಮೆಯ ಮಹಿಳೆಯರಿದ್ದಾರೆ. ಸ್ತಬ್ಧಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರ ಸಾಧನೆಗಳನ್ನು ಪ್ರದರ್ಶಿಸಲಾಗುತ್ತಿದೆ.ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕೆತ್ತನೆಯ ಕಲಾಕೃತಿ, ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲಾಕೃತಿ, ಕಿನ್ನಾಳ ಕಲಾ ವಸ್ತುಗಳು, ಕಂಚಿನ ಪ್ರತಿಮೆಗಳು, ಚೆನ್ನಪಟ್ಟಣದ ಮೆರುಗೆಣ್ಣೆಯ ಆಟಿಕೆಗಳು, ಮರಗೆತ್ತನೆ ಮತ್ತು ಕುಂಬಾರಿಕೆ ಹಾಗೂ ಹಿಂಬದಿಯಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ಜತೆಗೆ ಮಾತೆ ಕಮಲಾದೇವಿ ಇದ್ದರು. ಈ ಬಾರಿ ನಾರಿಶಕ್ತಿ ಥೀಮ್‌ನಡಿ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಕರ್ನಾಟಕ ಪಾಲ್ಗೊಳ್ಳುತ್ತಿದೆ.
Join The Telegram | Join The WhatsApp |