ಸುವರ್ಣ ವಿಧಾನಸೌಧ (ಬೆಳಗಾವಿ): ಬುಧವಾರವೂ ವಿಧಾನಸಭೆಯ ಕಲಾಪ ತಡರಾತ್ರಿವರೆಗೆ ನಡೆಯಿತು. ರಾತ್ರಿ 12.40ರವರೆಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ನಡೆಯಿತು.

ನಂತರ ಅನುದಾನ ಬಿಡುಗಡೆ ವಿಳಂಬದ ಕುರಿತು ಚರ್ಚೆ ಆರಂಭವಾಯಿತು. ಸಭಾಧ್ಯಕ್ಷ ಯು.ಟಿ. ಖಾದ‌ರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಹಲವು ಸದಸ್ಯರು ಸದನದಲ್ಲಿದ್ದರು.