ಲಕ್ನೋ : ಚುನಾವಣೆ ಬಳಿಕ 1 ಲಕ್ಷ ರೂ. ಕೊಡುತ್ತೇವೆ ಎಂದಿದ್ರಲ್ಲ, ಕೊಡಿ ಎಂದು ಮುಸ್ಲಿಂ ಮಹಿಳೆಯರು ಲಖನೌನಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ. ಈ ಕುರಿತು ವಿಡಿಯೋ ಕೂಡ ವೈರಲ್ ಆಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮಹಿಳೆಯರಿಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿಗಳನ್ನು ನೀಡಿತ್ತು. ಈ ಕುರಿತು ಗ್ಯಾರಂಟಿ ಕಾರ್ಡ್ ಕೂಡ ಬಿಡುಗಡೆ ಮಾಡಿತ್ತು. ಈ ಕಾರ್ಡ್ಅನ್ನು ಹಿಡಿದುಕೊಂಡ ಮುಸ್ಲಿಂ ಮಹಿಳೆಯರು ಕಾಂಗ್ರೆಸ್ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ.
ನಮಗೆ 1 ಲಕ್ಷ ರೂ. ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಅದರಂತೆ, ಗ್ಯಾರಂಟಿ ಕಾರ್ಡ್ಗಳನ್ನು ಹಿಡಿದುಕೊಂಡು ನಾವು ಇಲ್ಲಿಗೆ ಬಂದಿದ್ದೇವೆ. ಅವರು ಕೊಡುತ್ತೇನೆ ಎಂದಿದ್ದರು, ಫಾರ್ಮ್ ಕೂಡ ಕೊಟ್ಟಿದ್ದರು. ಅವುಗಳನ್ನು ತೆಗೆದುಕೊಂಡು ಬಂದಿದ್ದೇವೆ. ಇದುವರೆಗೆ ಸಿಕ್ಕಿಲ್ಲ ಎಂದು ಮುಸ್ಲಿಂ ಮಹಿಳೆಯರು ಹೇಳಿದ್ದಾರೆ. 12 ಗಂಟೆಗೆ ಬನ್ನಿ ಎಂದಿದ್ದರು, ಅದಕ್ಕಾಗಿ ಬಂದಿದ್ದೇವೆ. ಇದುವರೆಗೆ ದುಡ್ಡು ಸಿಕ್ಕಿಲ್ಲ ಎಂದು ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.