ದುಬೈ: ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ ತಂಡವು ಮಹಿಳಾ ಟಿ20 ವಿಶ್ವಕಪ್‌ನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಭಾನುವಾರ (ಅಕ್ಟೋಬರ್‌ 20) ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (NZW vs SAW) ಮತ್ತು ನ್ಯೂಜಿಲೆಂಡ್‌ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾವನ್ನು ಮಣಿಸಿದ ನ್ಯೂಜಿಲೆಂಡ್‌ ತಂಡವು ಚೊಚ್ಚಲ ಪ್ರಶಸ್ತಿ ಮುಡುಗೇರಿಸಿಕೊಂಡಿದೆ.

ಜಿದ್ದಾಜಿದ್ದಿನ ಹೋರಾಟದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 158 ರನ್‌ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ 9 ವಿಕೆಟ್‌ಗೆ 126 ರನ್‌ ಕಲೆ ಹಾಕಲು ಸಾಧ್ಯವಾಯಿತು. ಆ ಮೂಲಕ 32 ರನ್‌ಗಳಿಂದ ಸೋಲನುಭವಿಸಿತು.
ನ್ಯೂಜಿಲೆಂಡ್‌ ಪರ ಅಮೆಲಿಯಾ ಕೆರ್ 38 ಬಾಲ್‌ನಲ್ಲಿ 43 ರನ್‌ ಗಳಿಸಿ ಟಾಪ್‌ ಸ್ಕೋರರ್‌ ಎನಿಸಿಕೊಂಡರು. ಅಲ್ಲದೆ, ಅತ್ಯುತ್ತಮ ಬೌಲ್‌ ಮಾಡಿ 3 ವಿಕೆಟ್‌ ಕಬಳಿಸಿದರು. ಬ್ರೂಕ್ ಹ್ಯಾಲಿಡೇ 38 ಮತ್ತು ಸೂಜಿ ಬೇಟ್ಸ್ 32 ರನ್‌ ಕಲೆ ಹಾಕಿ ತಂಡದ ಸ್ಕೋರ್‌ ಅನ್ನು 150ರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾ ತಂಡದ ಪರ ರೋಸ್ಮರಿ ಮೈರ್ 3 ವಿಕೆಟ್‌ ಪಡೆದರು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 126 ರನ್‌ ಕಲೆ ಹಾಕಿತು. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ 33 ರನ್‌ ಕಲೆ ಹಾಕಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.