ಬೆಳಗಾವಿ : ಬೆಳಗಾವಿ ನಗರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಗರದ ಎಲ್ಲ ಪಿಎಸ್ಐ ಪಿಎ ರವರಿಗೆ ಸೂಚಿಸಿದಂತೆ ಮಾಳ ಮಾರುತಿ ಪೊಲೀಸ್ ಠಾಣೆಯವರು ಅಂತರ್ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಾಜ್ ಸುಭಾಷ್ ಕಚೇರಿ ಕಮಲಾಪುರ ತಾ& ಜಿ ಗುಲ್ಬರ್ಗ ಸದ್ಯ ನವೀನ್ ಗರಕುಲ ಕುಂಬಾರಿ ಸೋಲಾಪುರ್
ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500 ಐಷಾರಾಮಿ ಕಾರಿನ ಮೇಲೆ *PRESS* ಅಂತ ಬರೆಯಿಸಿ, ಅದರಲ್ಲಿ ಬಂದು ಮಹಾಂತೇಶನಗರ ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಒಪ್ಪಿಕೊಂಡಿದ್ದಾನೆ. ಅವನ ಕಡೆಯಿಂದ 10 ಲಕ್ಷ ಮೌಲ್ಯದ ಬಂಗಾರ ಹಾಗೂ ಸುಮಾರು 10 ಲಕ್ಷದ xuv ಕಾರು ಹೀಗೆ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಈತನೊಂದಿಗೆ ಕೃತ್ಯದಲ್ಲಿದ್ದ ಇನ್ನುಳಿದ ಆರೋಪಿತರಾದ 1.ಹುಸೇನ್ @ ಸಾಗರ್ ಗಾಯಕ್ವಾಡ್ 2.ಅಮುಲ್ ಹಾಗೂ 3.ಕೇತ್ಯಾ ಎಂಬುವವರು ಪರಾರಿಯಾಗಿದ್ದು, ವಿಶೇಷ ತಂಡವನ್ನು ರಚಿಸಿ ಅವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನದಲ್ಲಿ ಶ್ರಮಿಸಿದ ಮಾರ್ಕೆಟ್ ವಿಭಾಗದ ಎಸಿಪಿ ಸೋಮೇಗೌಡ ಯು. ಜಿ. ರವರ ಮಾರ್ಗದರ್ಶನದಲ್ಲಿ ಜಯಂ ಕಾಲಿ ಮಿರ್ಚಿ ಪಿ ಐ ಇವರ ನೇತೃತ್ವದ ತಂಡ ಹೊನ್ನಪ್ಪ ತಳವಾರ ಪಿಎಸ್ಐ ,ಶ್ರೀಶೈಲ್ ಹುಳಗೇರಿ ಪಿಎಸ್ಐ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ, ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ, ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಯೆಡಾ ಮಾಟಿನ್ ಮಾರ್ಬನ್ಯಾಂಗ್ ಐಪಿಎಸ್ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿಸಿರುತ್ತಾರೆ.