ಯಳಂತೂರು:ವಾರ್ಷಿಕ ಗೆಂಡೋತ್ಸವ ಸಂಪನ್ನ
ಗೋಳಿಯಂಗಡಿ :
ಗೋಳಿಯಂಗಡಿ ಸಮೀಪದ ಯಳಂತೂರು
ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ವಾರ್ಷಿಕ
ಗೆಂಡೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ
ಪುಷ್ಫಾಲಂಕಾರ ಹಾಗೂ ವಿವಿಧ ಧಾರ್ಮಿಕ ವಿಧಿ
ವಿಧಾನಗಳೊಂದಿಗೆ ಗುರುವಾರ ಸಂಪನ್ನಗೊಂಡಿದೆ.
ಬೆಳಿಗ್ಗೆ ಫಲ ಪ್ರಾರ್ಥನೆ,ನವಕ ಪ್ರಧಾನ
ಹೋಮ,ಚಂಡಿಕಾಯಾಗ, ಅಶ್ವಥ ವಿವಾಹ
ವಾರ್ಷಿಕೋತ್ಸವ,ಕುಂಕುಮಾರ್ಚನೆ,ಕರ್ಪೂರಾರತಿ,
ಹರಿವಾಣ
ನೈವೇದ್ಯ ಇನ್ನೀತರ ಸೇವಾಧಿಗಳು,
ಮಹಾಪೂಜೆ,
ಮಹಾಮಂಗಳಾರತಿ, ಡಾ.ವಿನಯ ನರೇಶ್ ಶೆಟ್ಟಿ
ಯಳಂತೂರು ಇವರಿಂದ ಮಧ್ಯಾಹ್ನ ಅನ್ನಸಂತರ್ಪಣೆ
ಸೇವೆ,ಸಂಜೆ ಆಯ್ದ ಭಜನಾ ತಂಡಗಳಿಂದ ಕುಣಿತ ಭಜನಾ
ಮಹೋತ್ಸವ, ರಾತ್ರಿ ಸೇವಾಧಿಗಳು,
ವಾರ್ಷಿಕ
ಗೆಂಡಸೇವೆ,ರಂಗಪೂಜೆ,ಢಕ್ಕೆಬಲಿ ಉತ್ಸವಗಳು
ನಡೆಯಿತು.