Join The Telegram | Join The WhatsApp |
ಬಾಗಲಕೋಟೆ :
ಸವದತ್ತಿ ಯಲ್ಲಮ್ಮ ಜಾತ್ರೆಯಿಂದ ಹಿಂದಿರುಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಹನುಮಂತ ಹುಣಸಿಕಟ್ಟಿ ಎಂಬುವರಿಗೆ ಸೇರಿದ ಟ್ಯಾಕ್ಟರ್ ಪಲ್ಟಿಯಾಗಿದ್ದು ಗೋವಿಂದ ಪಾಟೀಲ (20), ಹನುಮಂತ ಬೊಮ್ಮಕ್ಕನವರ (20) ಮೃತಪಟ್ಟವರು. ಇವರು ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದವರು. ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಚಾಲಕರಿಬ್ಬರ ಬೇಜವಾಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದ್ದು ರಸ್ತೆಯಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಓವರ್ ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. ಓವರ್ ಟೇಕ್ ಮಾಡಲು ಹೋಗಿ ಇನ್ನೊಂದು ಟ್ರ್ಯಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಹಾಗೂ ಮುಧೋಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Join The Telegram | Join The WhatsApp |