ಬೆಳಗಾವಿ : ಯಮಕನಮರಡಿಯ ಪಿಐ ಜಾವೇದ ಮುಶಾಪುರೆಯವರ ಕ್ರಿಯಾಶೀಲ ತನಿಖೆಯಿಂದ ಎರಡು ಬಂಗಾರ ಕಳುವಿನ ಪ್ರಕರಣಗಳು ಬಯಲಿಗೆ ಬಂದಿದೆ.

ಎರಡು ಕಳುವಿನ ಪ್ರಕರಣಗಳ ಪತ್ತೆ: ಅಡಿವಪ್ಪಾ ಲಗಮಪ್ಪಾ ಬಾಗರಾಯಿ ಸಾ: ಇಸ್ಲಾಂಪೂರ
ಇವರ ಮನೆಯಿಂದ 27-10-2024 ರಂದು 2200 ಗಂಟೆಯಿಂದ ದಿ. 28-10-2024 ರಂದು ಮುಂಜಾನೆ 6-30 ಗಂಟೆಯ ಅವಧಿಯಲ್ಲಿ ಸುಮಾರು 30 ಗ್ರಾಂ ತೂಕದ ಬಂಗಾರದ ಆಭರಣಗಳು ಕಳುವಾಗಿದ್ದವು.

ಇನ್ನೊಂದು ಪ್ರಕರಣ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸವಿತಾ ಬಸವರಾಜ ನಗಾರಿ ಸಾಃ ಯಮಕನಮರಡಿ ಇವರ ಪರ್ಸಿನಲ್ಲಿದ್ದ 2.5 ಗ್ರಾಂ ತೂಕದ ಬಂಗಾರದ ಆಭರಣಗಳು ಲಪಟಾಯಿಸಿದ್ದ 1. ಲಕ್ಷ್ಮೀಕಾಂತ ಕೃಷ್ಣಪ್ಪಾ ಬೇಡರಹಟ್ಟಿ ವಯಸ್ಸು 19 ವರ್ಷ ಸಾಃ ಬೇಡರಹಟ್ಟಿ ಹಾಲಿ: ದಾದಬಾನಟ್ಟಿ

2) ಈರಣ್ಣಾ ರವಿ ನಾಯಿಕ ವಯಸ್ಸು 22 ವರ್ಷ ಸಾಃ ಉಳ್ಳಾಗಡ್ಡಿ ಖಾನಾಪೂರ ಹಾಲಿಃ ದಾದಬಾನಟ್ಟಿ

3) ಸಂಜಯ ಸುರೇಶ ಗಡದಕ್ಕಿ ವಯಸ್ಸು 22 ವರ್ಷ ಸಾಃ ದಾದಬಾನಟ್ಟಿ (ಅಪರಾಧ ಸಂಖ್ಯೆ 134/2024) ಇವರನ್ನು 23-11-2024 ರಂದು ದಸ್ತಗೀರ ಮಾಡಿ ಅವರ ಕಡೆಯಿಂದ ಎರಡು ಪ್ರಕರಣದಲ್ಲಿ ಕಳುವಿಗೆ ಹೋದ ಈ ತಂಡದಿಂದ 5.5 ಗ್ರಾಂ ತೂಕದ ಆಭರಣಗಳನ್ನು ವಶ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.