ಬೆಂಗಳೂರು :
ನಟ, ರಾಂಕಿಂಗ್ ಸ್ಟಾರ್ ಯಶ್, ತಮ್ಮ 19ನೇ ಸಿನಿಮಾದ ಬಗ್ಗೆ ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಚಿತ್ರದ ಕುರಿತು ಪೋಸ್ಟ್ ಮಾಡಿರುವ ಅವರು, ಇದೀಗ ಸಮಯ ಬಂದಿದೆ. ಡಿಸೆಂಬರ್ 8 ರಂದು ಬೆಳಗ್ಗೆ 9:55ಕ್ಕೆ ಸಿನಿಮಾ ಹೆಸರು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಯಶ್ ಅವರ 19ನೇ ಚಿತ್ರವನ್ನು KVN ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಇನ್ನೂ ನಿನ್ನೆ ಸಂಜೆ ರಾಂಕಿಂಗ್ ಸ್ಟಾರ್, ಇನ್‌ಸ್ಟಾಗ್ರಾಂನಲ್ಲಿ ಲೋಡಿಂಗ್ ಎಂಬ ಪೋಸ್ಟರ್ ಅಪ್ಲೋಡ್ ಮಾಡಿದ್ದರು.

ಡಿಸೆಂಬರ್ 8ರಂದು ಬೆಳಗ್ಗೆ 9.55ಕ್ಕೆ ಯಶ್ 19 ಸಿನಿಮಾದ ಬಗ್ಗೆ ತಿಳಿಸಲಾಗುವುದು ಎಂದು ಯಶ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ಮಾಡುವುದಾಗಿ ಯಶ್ ತಿಳಿಸಿದ್ದಾರೆ.

ಯಶ್ ಅವರು ರವಿವಾರ ತನ್ನ ಸೋಷಿಯಲ್ ಮೀಡಿಯಾ ಡಿಪಿಯನ್ನು ಬದಲು ಮಾಡಿಕೊಂಡಿದ್ದರು.