ಎಣ್ಮೂರು : ಎಣ್ಮೂರು ಸಹಿಪ್ರಾ ಶಾಲೆಯಲ್ಲಿ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಒಬ್ಬ ವ್ಯಕ್ತಿ ಆರೋಗ್ಯ ಮತ್ತು ಸದೃಢತೆ , ಏಕಾಗ್ರತೆಯಿಂದ ಇರಬೇಕಾದರೆ ಯೋಗ ಅತೀ ಮುಖ್ಯ ಪಾತ್ರ ವಹಿಸುತ್ತದೆ.

ಯೋಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಅಬ್ದುಲ್ ಶರೀಫ್ ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ರತ್ನಾವತಿ , ಸಮುದಾಯ ಆರೋಗ್ಯ ಅಧಿಕಾರಿ ತೇಜಸ್ವಿನಿ ಹಾಗೂ ಯೋಗ ಶಿಕ್ಷಕಿ ಕಮಲಾ ನಡ್ಕ ಸುನೀತಾ ಹಾಗೂ ಜಯ ಉಪಸ್ಥಿತರಿದ್ದರು.

ಮುಖ್ಯ ಗುರುಗಳಾದ ಭುವನೇಶ್ವರಿ ಸ್ವಾಗತಿಸಿದರು. ಸಹ ಶಿಕ್ಷಕಿ ಸುರೇಖಾ, ಸಮುದಾಯ ಆರೋಗ್ಯಾಧಿಕಾರಿ ತೇಜಸ್ವಿನಿ, ಕಮಲ ನಡ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿ ಶಾಂತಮ್ಮ ವಂದಿಸಿದರು. ಅತಿಥಿ ಶಿಕ್ಷಕಿ ಗುಲಾಬಿ ಹಾಗೂ ಸೌಮ್ಯಲತ ಉಪಸ್ಥಿತರಿದ್ದರು .