ಢಾಕಾ: ಬಾಂಗ್ಲಾದೇಶದಿಂದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಪರಾರಿ ಬೆನ್ನಲ್ಲೇ, ಜೈಲು ಪಾಲಾಗಿದ್ದ ಅವರ ರಾಜಕೀಯ ಕಡುವೈರಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಬಿಡುಗಡೆಗೆ ಬಾಂಗ್ಲಾ ಅಧ್ಯಕ್ಷರು ಸೋಮವಾರ ರಾತ್ರಿ ಆದೇಶಿಸಿದ್ದಾರೆ.ವಿವಿಧ ಭ್ರಷ್ಟಾಚಾರ ಆರೋಪ ಹೊರಿಸಿ 2 ಬಾರಿ ಪ್ರಧಾನಿ ಆಗಿದ್ದ ಜಿಯಾರನ್ನು ಹಸೀನಾ ಜೈಲಿಗೆ ಹಾಕಿಸಿದ್ದರು. ಇದೇವೇಳೆ, ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂಧಿತರಾಗಿದ್ದ ಎಲ್ಲರ ಬಿಡುಗಡೆಗೂ ಆದೇಶಿಸಿದ್ದಾರೆ.