ಬೆಂಗಳೂರು: ಚುನಾವಣಾ ಅಕ್ರಮಕ್ಕೆ ಸಂಬಂಧಿಸಿ ಕಳೆದ 24 ತಾಸಿನಲ್ಲಿ 1.33 ಕೋಟಿ ರು. ನಗದು ಜಪ್ತಿ ಮಾಡಿರುವ ವಿವಿಧ ತನಿಖಾ ತಂಡಗಳು ಇದುವರೆಗೆ 23.19 ಕೋಟಿ ರು. ನಗದನ್ನು ವಶಪಡಿಸಿಕೊಂಡಿವೆ. ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೆ ಒಟ್ಟು 72.84 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದುವರೆಗೆ 1.73 ಕೋಟಿ ರೂ. ಉಚಿತ ಉಡುಗೊರೆಗಳನ್ನು, 7.71 ಲಕ್ಷ ಇತರೆ ವಸ್ತುಗಳನ್ನು, 29 ಕೋಟಿ ರೂ. ಮೌಲ್ಯದ ಮದ್ಯ, 1.63 ಕೋಟಿ ರೂ. ಮೌಲ್ಯದ 238 ಕೆ.ಜಿ. ಮಾದಕ ವಸ್ತುಗಳನ್ನು, 9.18 ಕೋಟಿ ರೂ. ಮೌಲ್ಯದ 15.38 ಕೆಜಿ ಚಿನ್ನ ಮತ್ತು 27.23 ಲಕ್ಷ ರೂ. ಮೌಲ್ಯದ 59 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿ ದಂತೆ 1,087 ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಟಿಎಂ ಲೇಔಟ್‌ನಲ್ಲಿ 87.90 ಲಕ್ಷ ರು. ಮೌಲ್ಯದ ಒಂದು ಸಾವಿರ ಎಲ್‌ಇಡಿ ಟಿವಿಗಳನ್ನು, ದಾವಣಗೆರೆ ಕ್ಷೇತ್ರದಲ್ಲಿ 73.98 ಲಕ್ಷ ರು. ನಗದನ್ನು ಜಪ್ತಿ ಮಾಡಲಾಗಿದೆ.