ಭೋಪಾಲ : ಮಧ್ಯಪ್ರದೇಶದ ದಿಂಡೋರಿಯಲ್ಲಿ ಪಿಕ್ಅಪ್ ಟ್ರಕ್ ಪಲ್ಟಿಯಾಗಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. 20 ಜನ ಗಾಯಗೊಂಡಿದ್ದಾರೆ.
ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಬಡ್ಜರ್ ಘಾಟ್ ಬಳಿ ಅಪಘಾತ ಸಂಭವಿಸಿದೆ. ವಾಹನದ ಚಾಲಕ ಸ್ಟಿಯರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ.
ಜಿಲ್ಲೆಯ ಶಹಪುರಾ ಬ್ಲಾಕ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಮ್ಹೈ ದೇವ್ರಿ ಗ್ರಾಮಕ್ಕೆ ತೆರಳಿದ್ದವರು ಪಿಕ್‌ಅಪ್‌ನಲ್ಲಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರಲ್ಲಿ ಏಳು ಪುರುಷರು, ಆರು ಮಹಿಳೆಯರು ಮತ್ತು ಒಬ್ಬ ಬಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.