ಐನಾಪುರದಲ್ಲಿ ಮಹಿಳೆಯ ಮೇಲೆ ಹಲ್ಲೆ, ಪುತ್ರನ ಮೇಲೂ ಮಾರಣಾಂತಿಕ ಕೃತ್ಯ

ಬೆಳಗಾವಿ :
ಕಾಗವಾಡ ತಾಲೂಕು ಐನಾಪುರ ಬಳಿ ಮಹಿಳೆ ಮೇಲೆ ಕೈ ಮಾಡಲಾಗಿದ್ದು, ಆಕೆಯ ಮಗನ ಮೇಲೆ ಸಹಾ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ.

ಜಮೀನು ಒತ್ತುವರಿ ವಿಷಯವಾಗಿ ಗಲಾಟೆ ನಡೆದಿದೆ. ಒತ್ತುವರಿ ಪ್ರಶ್ನಿಸಲು ಹೋಗಿದ್ದ ಮಹಿಳೆ ಮತ್ತು ಆತನ ಮಗನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪುತ್ರ ಮುರಾರಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಐನಾಪುರ ಸುಭಾಷ್ ದಾನೊಳ್ಳಿ, ಸುರೇಶ್ ದಾನೊಳ್ಳಿ, ಮಾಯಪ್ಪ ಹಲ್ಯಾಳ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಕಾಗವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.