ಧಾರವಾಡ :
ಮಗು ಮಲಗುವಾಗ ಅಳುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗುವನ್ನು ಗೋಡೆಗೆ ಎಸೆದು ಬಿಸಾಕಿದ ಘಟನೆ ನಡೆದಿದೆ.

ಧಾರವಾಡ ತಾಲೂಕು ಯಾದವಾಡ ಗ್ರಾಮದಲ್ಲಿ ಘಟನೆ ನಡೆದಿದೆ.
ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಕಿಮ್ಸ್‌ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದೆ. ಶಂಭುಲಿಂಗಯ್ಯ ಶಾಪುರಮಠ ಎಂಬಾತ ತಂದೆಯಾಗಿದ್ದಾನೆ. ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ. ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ.

ಕುಟುಂಬಸ್ಥರು ಗರಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಭುಲಿಂಗಯ್ಯನನ್ನು ಬಂಧಿಸಿದ್ದಾರೆ.