ಬೆಳಗಾವಿ ಸುವರ್ಣಸೌಧ : ಬಳ್ಳಾರಿ ಜಿಲ್ಲೆಯಲ್ಲಿ ಜೀನ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಗೆ ಕೆಐಎಡಿಬಿ ಅವರಿಂದ ಆಲದಹಳ್ಳಿ ಗ್ರಾಮದ ಸರ್ವೆ ನಂ.122/ಎ ರ 50 ಎಕರೆ ಜಮೀನನ್ನು ಬಳ್ಳಾರಿ ಗಾರ್ಮೆಂಟ್ಸ್ ಎಕ್ಸ್ಪೋರ್ಟ್ ಕ್ಲಸ್ಟರ್ ಲಿ. ಬಳ್ಳಾರಿ ಅವರಿಗೆ ಹಂಚಿಕೆ ಮಾಡಲಾಗಿದೆ ಎಂದು ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀ¯ ಇಂದು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ವೈ.ಎಂ.ಸತೀಶ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಎಸ್.ಪಿ.ವಿ. ಮುಖಾಂತರ ಜವಳಿ ಪಾರ್ಕ್ ನ್ನು ಸ್ಥಾಪಿಸಲು ಅವಶ್ಯವಿರುವ ಪ್ರಾರಂಭಿಕ ಕ್ರಮಗಳು ಅಂದರೆ, ವಿವಿಧ ಇಲಾಖೆಗಳಿಂದ ಪ್ರಮಾಣ ಪತ್ರಗಳನ್ನು ಹಾಗೂ KIADB ಬೆಂಗಳೂರು ರವರಿಂದ ವಿವರವಾದ ಯೋಜನ ವರದಿಗೆ ಅನುಮೋದನೆಯನ್ನು ಪಡೆದ ನಂತರ ಪಾರ್ಕ್ನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಜೀನ್ಸ್ ಪಾರ್ಕ್ ಸ್ಥಾಪನೆಯಿಂದ ಎಲ್ಲಾ ಘಟಕಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ ಉತ್ಪನ್ನಗಳ ಗುಣಮಟ್ಟದ ಹೆಚ್ಚಳ ಹಾಗೂ ಉತ್ಪಾದನಾ ವೆಚ್ಚ ಸಾಗಾಣಿಕೆ ವೆಚ್ಚ, Turnaround time ನ್ನು ಕಡಿಮೆಗೊಳಿಸಿ, ಸ್ಪರ್ಧಾತ್ಮಕ ದರದಲ್ಲಿ ಜೀನ್ಸ್ ಉತ್ಪನ್ನವನ್ನು ಮಾರುಕಟ್ಟೆಗೆ ಒದಗಿಸುವ ಉದ್ದೇಶ ಹೊಂದಲಾಗಿದೆ ಹಾಗೂ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.