ಬೆಳಗಾವಿ :
ರಾಯಬಾಗ ತಾಲೂಕು ಮುಗಳಖೋಡ ಬಳಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತಕ್ಕೆ ಆರು ಜನ ಬಲಿಯಾಗಿದ್ದಾರೆ. ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ.

ರಸ್ತೆ ಪಕ್ಕದಲ್ಲಿ ಕಾರು ಮಗುಚಿ ಬಿದ್ದಿದೆ. ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಮೃತಪಟ್ಟಿದ್ದಾರೆ. ಇವರು ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದವರು
ಎಂಬ ಮಾಹಿತಿ ಲಭ್ಯವಾಗಿದೆ.

ಮುಗಳಖೋಡ ಕಾಲುವೆ ಬಳಿ ಶುಕ್ರವಾರ ನಡೆದಿದೆ. ಬೈಕ್‌ಗೆ ಗುದ್ದಿ ನಂತರ ಮರಕ್ಕೆ ಕಾರು ಡಿಕ್ಕಿಯಾಗಿದ್ದರಿಂದ ಬೈಕ್ ಸವಾರರು ಸೇರಿ ಐವರು ದುರ್ಮರಣ ಹೊಂದಿದ್ದಾರೆ.

ಗುರ್ಲಾಪುರದ ನಿವಾಸಿಗಳಾದ ಮಲ್ಲಿಕಾರ್ಜುನ್ ಮರಾಠೆ(16), ಲಕ್ಷ್ಮೀ ಮರಾಠೆ(19), ಆಕಾಶ ಮರಾಠೆ(14), ನಿಪನಾಳ ಗ್ರಾಮದ ಶ್ರೀಕಾಂತ ಪಡತರಿ(22), ಮುಗಳಖೋಡ ಗ್ರಾಮದ ನಾಗಪ್ಪ ಯಡವನ್ನವರ್(48) ಮೃತರು. ಗುರ್ಲಾಪುರ ಕಡೆಯಿಂದ ಮುಗಳಖೋಡದತ್ತ ಹೊರಟಿದ್ದ ಕಾರು ಮೊದಲು ಬೈಕ್‌ಗೆ ಗುದ್ದಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಇದರಿಂದ ದುರಂತ ನಡೆದಿದ್ದು, ಐವರು ಮೃತರ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.