ಬೆಳಗಾವಿ : ನಿಪ್ಪಾಣಿ-ಜತ್ರಾಟ ರಸ್ತೆಯಲ್ಲಿ ರಿಕ್ಷಾ ಪಲ್ಟಿಗೊಂಡ ಪರಿಣಾಮ ಮಹಿಳೆ ಮೃತಪಟ್ಟು ಚಾಲಕ ಸೇರಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಇಂದುಬಾಯಿ ರಾಮಚಂದ್ರ ಮೋರೆ( 70) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪ್ಪಾ ಸೋ ಪಾಟೀಲ(45), ಅವರ ಪತ್ನಿ ಸುರೇಖಾ (40), ಸಿದ್ದು ನರಾಟೆ (65)ಇವರೆಲ್ಲ ಗಂಭೀರವಾಗಿ ಗಾಯಗೊಂಡಿದ್ದು ಇವರೆಲ್ಲ ಜತ್ರಾಟ ನಿವಾಸಿಗಳು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.