ಅಯೋಧ್ಯೆ: ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಾದ ಒಂದೇ ತಿಂಗಳಿನಲ್ಲಿ ಬರೋಬ್ಬರಿ 25 ಕೋಟಿ ರೂ. ಕಾಣಿಕೆ ಬಂದಿದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ.

ಇದುವರೆಗೂ 60 ಲಕ್ತ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ಜ.23ರಿಂದ ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಒಟ್ಟು 25 ಕೆಜಿ ಚಿನ್ನ, ಬೆಳ್ಳಿ ಆಭರಣ, ಹುಂಡಿ ಕಾಣಿಕೆ, ಚೆಕ್, ಡಿಡಿಗಳು ಸೇರಿದೆ. ಇದು ಆನ್ ಲೈನ್ ಕಾಣಿಕೆ ಹೊರತುಪಡಿಸಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ. ಜ.23ರಿಂದ ಇಲ್ಲಿವರೆಗೂ 60 ಲಕ್ಷ ಭಕ್ತರು ಬಾಲ ರಾಮನ ದರ್ಶನ ಪಡೆದಿದ್ದಾರೆ. ರಾಮ ನವಮಿ ವೇಳೆ ಭಕ್ತರ ಸಂಖ್ಯೆ 50 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.

ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ. ಬಾಲಕ ರಾಮ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರುವ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12.30ರಿಂದ 1.30 ರವರೆಗೆ ರಾಮ ವಿಶ್ರಾಂತಿ ಪಡೆಯುತ್ತಾನೆ. ಹೀಗಾಗಿ ನಿತ್ಯ ಮಧ್ಯಾಹ್ನ ಒಂದು ಗಂಟೆ ದೇಗುಲದ ಬಾಗಿಲು ಮುಚ್ಚಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಇತ್ತೀಚೆಗೆ ತಿಳಿಸಿದ್ದರು.