ಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿದ ಪರಿಣಾಮ 50 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ನಡೆದಿದೆ.
ಕೆರೂರು ಗ್ರಾಮದಲ್ಲಿ ನಡೆದ ಜಾತ್ರೆಯೊಂದಕ್ಕೆ ಹಲವಾರು ಭಕ್ತರು ಆಗಮಿಸಿದ್ದರು. ಜಾತ್ರೆ ವೇಳೆ ಪ್ರಸಾದ ಸೇವಿಸಿದ ಪರಿಣಾಮ ವಾಂತಿ ಭೇದಿ ಕಾಣಿಸಿಕೊಂಡು 50 ಮಂದಿ ಅಸ್ವಸ್ಥರಾಗಿದ್ದಾರೆ. 30 ಜನರಿಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ, 10 ಜನರಿಗೆ ಕೆರೂರಿನ ಅಂಗವಾಡಿಯಲ್ಲಿ ಹಾಗೂ 10 ಜನರಿಗೆ ಯಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಹಿನ್ನಲೆ ವೈದ್ಯಕೀಯ ತಂಡ ಗ್ರಾಮದಲ್ಲೇ ಬೀಡು ಬಿಟ್ಟಿದೆ.
ಘಟನೆ ವಿವರ: ಕೆರೂರು ಗ್ರಾಮದ ಬಾಳುಮಾಮಾ ಜಾತ್ರೆಯಲ್ಲಿ ಸಾವಿರಾರು ಜನ ನಿನ್ನೆ(ಮೇ.29) ಪ್ರಸಾದ ಸೇವಿಸಿದ್ದರು. ಸಂಜೆ ಊಟ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿದೆ. ಇದು ತಿಳಿಯದೇ ಮಧ್ಯಾಹ್ನ ಉಳಿದಿದ್ದ ಅಡುಗೆಯನ್ನು 200ಕ್ಕೂ ಹೆಚ್ಚು ಜನ ರಾತ್ರಿಯೂ ಸೇವಿಸಿದ್ದರು ಎನ್ನಲಾಗಿದೆ. ಇನ್ನು ಅಸ್ವಸ್ಥರಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಂಡ ಗ್ರಾಮದಲ್ಲೇ ಬಿಡುಬಿಟ್ಟಿದೆ.