ಬೆಳಗಾಂವ,ಬೆಲಗಾಂ ಹೋಗಿ
“ಬೆಳಗಾವಿ” ಎಂದು ಮರುನಾಮಕರಣವಾಗಿ
ಎಂಟು ವರ್ಷಗಳೇ ಆಗಿವೆ.

ಬೆಳಗಾವಿ ಬದಲು ಬೆಳಗಾಂವ ಎಂದು ಬರೆಸುವವರ
ವಿರುದ್ಧ ಕನ್ನಡ ಸಂಘಟನೆಗಳು ಮೇಲಿಂದ
ಮೇಲೆ ಆಕ್ಷೇಪ ಎತ್ತುತ್ತಲೇ ಇರುತ್ತವೆ. ಆದರೆ
ರಾಜ್ಯ ವಿಧಾನ ಪರಿಷತ್ತಿನ ಅಧಿಕಾರಿಗಳಿಗೆ ಇನ್ನೂ “ಬೆಳಗಾಂ” ಬೇಕಾಗಿದೆಯೆಂದು
ಕಾಣುತ್ತಿದೆ!

ಸದ್ಯ ಬೆಳಗಾವಿಯಲ್ಲಿ ನಡೆದಿರುವ ವಿಧಾನ ಮಂಡಲದ ಚಳಿಗಾಲ ಅಧಿವೇಶನದ ಕಲಾಪಗಳನ್ನು ವರದಿ
ಮಾಡುತ್ತಿರುವ ವರದಿಗಾರರಿಗೆ ನೀಡಿದ ಗುರುತಿನ ಚೀಟಿಗಳಲ್ಲಿ ಬೆಳಗಾವಿ ಬದಲಾಗಿ
ಬೆಲಗಾಂ ಎಂದೇ ಇಂಗ್ಲೀಷಿನಲ್ಲಿ
ಮುದ್ರಿಸಲಾಗಿದೆ.ರಾಜ್ಯ ಸರಕಾರದ ಅಧಿಕಾರಿಗಳಿಗೆ ಬೆಳಗಾವಿ ಮರುನಾಮಕರಣ
ಗೊತ್ತಿರದಿದ್ದರೆ ಖಾಸಗಿ ವಾಣಿಜ್ಯ
ಸಂಸ್ಥೆಗಳಿಗೆ ಬೆಳಗಾವಿ ಎಂದು
ಬರೆಸಿ ಎಂದು ಹೇಳುವದಾದರೂ ಹೇಗೆ?
ಎಂದು ಕನ್ನಡ ಹೋರಾಟಗಾರರು
ಪ್ರಶ್ನಿಸುವಂತಾಗಿದೆ.

✒️ಅಶೋಕ ಚಂದರಗಿ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ