ಬೆಳಗಾವಿ :
ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ನಡೆಗೆ ವಿರೋಧ ವ್ಯಕ್ತ ಮಾಡಿ, ನಾನು ಬರುವ ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲವೆಂದು ಹೇಳಿಕೆ ಬಂದಿದ್ದು, ಅದು ಸಂಪೂರ್ಣ ತಪ್ಪು, ಆ ರೀತಿ ನಾನು ಎಲ್ಲಿಯೂ ಹೇಳಿಕೆಯನ್ನು ನೀಡಿರುವುದಿಲ್ಲ
ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ವಿರೋಧ ಪಕ್ಷದ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸವಿದ್ದು, ನಗರ ಸೇವಕ ಅಭಿಜಿತ್ ಜವಳಕರ ಅವರ ಸಮಸ್ಯೆ ಇನ್ನು ಪರಿಹಾರವಾಗಿಲ್ಲ. ಬರುವ ದಿನಗಳಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಶೋಕ ಅವರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದು ಅಭಯ ಪಾಟೀಲ ಹೇಳಿದ್ದಾರೆ.