ಬೆಳಗಾವಿ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ರಾಮನಗೌಡ ಕನ್ನೊಳ್ಳಿ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಜಂಟಿ ನಿರ್ದೇಶಕರಾಗಿದ್ದ ಪ್ರವೀಣ ಶಿಂತ್ರಿ ಅವರನ್ನು ರಾಜ್ಯ ಸರ್ಕಾರ ಇದೀಗ ಎತ್ತಂಗಡಿ ಮಾಡಿದೆ. ಅವರು ಬೆಳಗಾವಿಯಲ್ಲಿ ಜಂಟಿ ನಿರ್ದೇಶನರಾಗಿ ಕೇವಲ ಐದು ತಿಂಗಳು ಮಾತ್ರ ಕಾರ್ಯನಿರ್ವಹಿಸಿದ್ದರು. ಅವರು ಪ್ರಾಮಾಣಿಕ, ದಕ್ಷ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿನ ದೇವರು ಎನಿಸಿಕೊಂಡಿದ್ದರು. ಆದರೆ, ಬೆಳಗಾವಿ ಜಿಲ್ಲೆಯ ರಾಜಕೀಯ ಒತ್ತಡದ ಕಾರಣದಿಂದ ಅವರನ್ನು ಅಷ್ಟರಲ್ಲೇ ವರ್ಗಾವಣೆ ಮಾಡಲಾಗಿದೆ.

ಆದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ಮೂರು ವರ್ಷಗಳ ಅವಧಿಯಲ್ಲಿ ಬೆಳಗಾವಿಯಲ್ಲಿ ಕೆಲಸ ಮಾಡಿದ್ದ ರಾಮನಗೌಡ ಕನ್ನೊಳಿ ಅವರು ಸಹಾ ಅತ್ಯುತ್ತಮ ಹಾಗೂ ದಕ್ಷ ಅಧಿಕಾರಿಯಾಗಿ ಜನ ಮೆಚ್ಚುಗೆ ಗಳಿಸಿದ್ದರು. ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳ ಅತ್ಯಂತ ಪ್ರೀತಿ ಪಾತ್ರ ಅಧಿಕಾರಿ ಎನಿಸಿಕೊಂಡಿದ್ದರು. ಜೊತೆಗೆ ತಮ್ಮ ಇಲಾಖೆಯಲ್ಲಿ ಇರುವ ಎಲ್ಲಾ ಸಿಬ್ಬಂದಿಗಳನ್ನು ತಮ್ಮ ಮನೆಯವರು ಎಂಬಂತೆ ನೋಡಿಕೊಂಡು ಪ್ರತಿಯೊಬ್ಬರ ಪ್ರೀತ್ಯಾಧಾರಗಳಿಗೆ ಕಾರಣವಾಗಿದ್ದರು. ಈ ಹಿಂದೆ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಎಲ್ಲರೂ ಕಣ್ಣೀರು ಹಾಕಿದ್ದೆ ಅವರ ಸೇವಾಗುಣಕ್ಕೆ ಸಾಕ್ಷಿ. ಇದೀಗ ಅವರು ಮತ್ತೆ ಬೆಳಗಾವಿಗೆ ಆಗಮಿಸಿದ್ದು ಜಿಲ್ಲೆಯ ಜನತೆಗೆ ಅವರ ಸೇವೆ ಲಭ್ಯವಾಗುತ್ತಿದೆ. ಆದರೆ, ಅವರು ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದಿರಲಿ, ತಮ್ಮ ಪ್ರಾಮಾಣಿಕ ಹಾಗೂ ದಕ್ಷಸೇವೆಯನ್ನು ಮತ್ತೆ ಮುಂದುವರಿಸುವಂತಾಗಲಿ ಎನ್ನುವುದು ಜನತೆಯ ಆಗ್ರಹವಾಗಿದೆ.