ಬೆಳಗಾವಿ: ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆಯರಿಬ್ಬರು ಇತ್ತೀಚಿಗೆ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಬುಧವಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಕಲಾವತಿ ಬಿದರವಾಡಿ ಮತ್ತು ಸವಿತಾ ಎಂಬ ಮಹಿಳೆಯರು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದರು. ಇವರಿಬ್ಬರಿಗೆ ನಾಲ್ವರು ಮಕ್ಕಳಿದ್ದಾರೆ. ಇವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೊಬತ್ ಅವರು ಸರಕಾರದ ಪರವಾಗಿ ಹೆಚ್ಚಿನ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದರು. ಭಾಗ್ಯಶ್ರೀ ಕೋಕಿತ್ಕರ್, ಸ್ನೇಹಲ್ ಕೋಲೇಕರ, ಚೇತನಾ ಅಗಸೇಕರ್ ಮತ್ತು ಬಿಜೆಪಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.