ಹೆಬ್ರಿ : ದಿನಾಂಕ 19:08:2024 ರಂದು ಹೆಬ್ರಿಯ ಅಮೃತ ಭಾರತಿ ವಿದ್ಯಾ ಕೇಂದ್ರದ ಕೇಶವ ಸಭಾಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಆರತಿಯನ್ನು ಬೆಳಗಿಸಿ ಪರಸ್ಪರ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾ ಬಂಧನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾ ಕೇಂದ್ರದ ಶಿಕ್ಷಕಿ ಅಕ್ಷತಾ ಸಂದೀಪ್ ಜೈನ್ ಅವರು ರಕ್ಷಾಬಂಧನದ ಮಹತ್ವ ಮತ್ತು ಅದರ ಹಿನ್ನೆಲೆಯನ್ನು ಸವಿವರವಾಗಿ ಹೇಳುವುದರೊಂದಿಗೆ ದೇಶ ಹಾಗೂ ಧರ್ಮ ರಕ್ಷಣೆಯಲ್ಲಿ ತಮ್ಮ ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾ ಕೇಂದ್ರದ ಪ್ರಾಚಾರ್ಯ ಅರುಣ್ ಎಚ್ .ವೈ ಹಾಗೂ ಮುಖ್ಯೋಪಾಧ್ಯಾಯಿನಿ ಅನಿತಾರವರು ಉಪಸ್ಥಿತರಿದ್ದರು.